ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಟೆಂಡರ್ ಗುಂಡಪ್ಪನ ಬಂಧನ

ಶನಿವಾರ, 25 ಅಕ್ಟೋಬರ್ 2014 (19:12 IST)
ಆರ್ಕಿಡ್ಸ್ ಶಾಲೆಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆ ಅಟೆಂಡರ್ ಗುಂಡಪ್ಪ ಲೈಂಗಿ ದೌರ್ಜನ್ಯ ನಡೆಸಿರುವುದು ದೃಢಪಟ್ಟಿದ್ದು, ಪೊಲೀಸರು ಗುಂಡಪ್ಪನನ್ನು ಬಂಧಿಸಿದ್ದಾರೆ. ಅಟೆಂಡರ್ ಗುಂಡಪ್ಪನನ್ನು ಬಾಲಕಿ ಘಟನೆ ನಡೆದ ನಾಲ್ಕು ದಿನಗಳ ನಂತರ ಗುರುತಿಸಿದ್ದಾಳೆಂದು ತಿಳಿದುಬಂದಿದೆ.  ಬೆಂಗಳೂರಿನಲ್ಲಿ ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮೇಲಿನ ವಿಷಯವನ್ನು ಬಹಿರಂಗಪಡಿಸಿದ್ದಾರೆ.

 ಕಳೆದ 21ರಂದು ಆರ್ಕಿಡ್ಸ್ ಶಾಲೆಯ ಆವರಣದಲ್ಲಿ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಬಾಲಕಿ ಮನೆಗೆ ಹಿಂತಿರುಗಿ ಹೊಟ್ಟೆನೋವೆಂದು ಅಳುತ್ತಿದ್ದಾಗ ಏನಾಯಿತೆಂದು ಕೇಳಿದಾಗ ಅಂಕಲ್ ಹೊಡೆದರು ಎಂದು ತಾಯಿಗೆ ದೂರು ನೀಡಿದ್ದಳು. ನಂತರ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತ್ತು.

ಆದರೆ ಆರೋಪಿ ಯಾರೆಂಬುದನ್ನು ಪತ್ತೆಹಚ್ಚಲು ಕಳೆದ ನಾಲ್ಕು ದಿನಗಳಿಂದ ಪೊಲೀಸರು ವಿಫಲರಾಗಿದ್ದರು. ಈಗ ಬಾಲಕಿ ಅಟೆಂಡರ್ ಗುಂಡಪ್ಪನನ್ನು ಗುರುತಿಸಿರುವುದರಿಂದ ಪೊಲೀಸರು ಅವನನ್ನು ಬಂಧಿಸಿ, ತನಿಖೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ