ಬೆಂಗಳೂರಿನಲ್ಲಿ ಮಹಿಳಾ ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ

ಸೋಮವಾರ, 28 ಜುಲೈ 2014 (11:23 IST)
ಬೆಂಗಳೂರಿನಲ್ಲಿ  ಕಾಮುಕರ ಅಟ್ಟಹಾಸ ಇನ್ನೂ ಮುಂದುವರಿದಿದೆ. ಜುಲೈ 25ರಂದು ರಾತ್ರಿ ಇಬ್ಬರು  ದುಷ್ಕರ್ಮಿಗಳು ಮಹಿಳಾ ಟೆಕ್ಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ದೂರು ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್ 354ರ ಅಡಿ ಪ್ರಕರಣ ದಾಖಲಿಸಲಾಗಿದೆ. ನೊಂದ ಯುವತಿ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

 ರಾತ್ರಿ 10.30ರಿಂದ 11ಗಂಟೆಯ ನಡುವೆ ಕೆಲಸ ಮುಗಿಸಿಕೊಂಡು ಬಸ್‌ಸ್ಟಾಪ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ  ಇಬ್ಬರು ಯುವಕರು ಬೈಕಿನಲ್ಲಿ ಬಂದು ಅಡ್ಡಗಟ್ಟಿ ನಿಲ್ಲಿಸಿ ಕೈಹಿಡಿದು ಎಳೆದರು. ತಾನು ಕಿರುಚಿಕೊಂಡಾಗ ಅಕ್ಕಪಕ್ಕದ ಮನೆಯವರು ಬಂದಿದ್ದರಿಂದ ಅವರು ಓಡಿಹೋದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

 ಯುವತಿ ಚಾಮುಂಡಿನಗರದ ನಿವಾಸಿಯಾಗಿದ್ದಾರೆ. ಆರೋಪಿಗಳೂ ಕೂಡ ಚಾಮುಂಡಿನಗರದ ನಿವಾಸಿಗಳೆಂದು ತಿಳಿದುಬಂದಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ