ಬಸ್`ನಲ್ಲಿ ಟೆಕ್ಕಿಗೆ ಲೈಂಗಿಕ ಕಿರುಕುಳ: ನೆರವಿಗೆ ಬಂತು ನೋ ಯುವರ್ ಪೊಲೀಸ್ ಸ್ಟೇಶನ್ ಆಪ್

ಗುರುವಾರ, 11 ಮೇ 2017 (10:54 IST)
ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳಾ ಟೆಕ್ಕಿ ನೋ ಯುವರ್ ಪೊಲೀಸ್ ಸ್ಟೇಶನ್ ಆಪ್ ಮೂಲಕ ಕಾಮುಕನನ್ನ ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 ಬೆಂಗಳೂರಿನ ಇಬ್ಬಲೂರು ರಿಂಗ್ ರೋಡ್ ಬಳಿ ವೋಲ್ವೋ ಬಸ್ ತೆರಳುತ್ತಿತ್ತು. ಈ ಸಂದರ್ಭ ಬಸ್`ನಲ್ಲಿ ವ್ಯಕ್ತಿಯೊಬ್ಬ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಕೂಡಲೇ ಮಹಿಳೆ ವ್ಯಕ್ತಿಯ ಫೋಟೋ ಕ್ಲಿಕ್ಕಿಸಿ ನೋ ಯುವರ್ ಪೊಲೀಸ್ ಸ್ಟೇಶನ್ಆಪ್ ಮೂಲಕ ಬೆಳ್ಳಂದೂರು ಪೊಳಿಸರಿಗೆ ಫೋಟೋ ಸಹಿತ ಮಾಹಿತ ರವಾನಿಸಿದ್ದಾರೆ.

ಮಹಿಳೆಯ ಮಾಹಿತಿ ಆಧರಿಸಿ ಧಾವಿಸಿ ಬಂದ ಹೊಯ್ಸಳ ವಾಹನದಲ್ಲಿ ಬಂದ ಪೊಲೀಸರು ಬಸ್ ತಡೆದು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನನ್ನ 47 ವರ್ಷದ ಮಧುಶೂದನ್ ಎಂದು ಗುರ್ತಿಸಲಾಗಿದೆ. ವೋಲ್ವೋ ಬಸ್ ಬೆಂಗಳೂರಿನಿಂದ ಹೈದ್ರಾಬಾದ್`ಗೆ ತೆರಳುತ್ತಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ