ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ್ರೂ ಆಸ್ಪತ್ರೆಯಲ್ಲಿ ಕ್ಷೇಮ

ಶುಕ್ರವಾರ, 21 ನವೆಂಬರ್ 2014 (19:18 IST)
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿ ತುಕಾರಾಂ ಮಜ್ಜಗಿ ವಿರುದ್ದ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿಲ್ಲ. ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ಪೊಲೀಸರು ಆರೋಪಿಯ ಪ್ರಭಾವಕ್ಕೆ ಒಳಗಾಗಿ ಕ್ರಮ ಕೈಗೊಳ್ಲುತ್ತಿಲ್ಲ ಎಂದು ಹಲವಾರು ಮಹಿಳಾ ಸಂಘಟನೆಗಳು ಪ್ರತಿಭಟನೆ ಮಾಡುತ್ತಿವೆ.

ತುಕಾರಾಂ ವಿರುದ್ಧ ಮಹಿಳಾ ಸಹಾಯಕ ಎಂಜಿನಿಯರ್ ದೂರು ನೀಡಿದ್ದರು. ದೂರು ನೀಡಿ ಎರಡು ದಿನ ಕಳೆದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ ಎಂದು ಆರೋಪಿಸಲಾಗಿದೆ. ಆರೋಪಿಯ ವಿರುದ್ಧ ಲೈಂಗಿಕ ಪ್ರಕರಣದ ದೂರು ದಾಖಲಾದ ಕೂಡಲೇ ಪೊಲೀಸರು ಬಂಧಿಸಿ ಅವರ ತನಿಖೆ ನಡೆಸಬೇಕಿತ್ತು.

ಆದರೆ ಅನಾರೋಗ್ಯದ ಕಾರಣ ನೀಡಿ ತುಕಾರಾಂ ಆಸ್ಪತ್ರೆಗೆ ಸೇರಿದ್ದು, ಪೊಲೀಸರು ಸಹ ನಿಷ್ಕ್ರಿಯರಾಗಿದ್ದಾರೆ ಎಂದು ಮಹಿಳಾ ಸಂಘಟನೆಗಳು ಆರೋಪಿಸಿವೆ. 

ವೆಬ್ದುನಿಯಾವನ್ನು ಓದಿ