ಮಠದಲ್ಲಿಯೇ ಪದ್ಮ ಪ್ರಶಸ್ತಿ ಸ್ವೀಕರಿಸಿದ ನಡೆದಾಡುವ ದೇವರು

ಬುಧವಾರ, 13 ಮೇ 2015 (11:28 IST)
ಜಿಲ್ಲೆಯ ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿ ವಿ.ಉಮೇಶ್ ಅವರು ಕೇಂದ್ರ ಸರ್ಕಾರದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನಗರದಲ್ಲಿ ಇಂದು ಪ್ರದಾನ ಮಾಡಿದರು. 
 
ಮಠದಲ್ಲಿ ಪ್ರದಾನ ಮಾಡಲಾದ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಶ್ರೀಗಳು ಮಾಧ್ಯಮಗಳೊಂದಿಗೆ ಮಾತನಾಡಿ, ಪದ್ಮ ಪ್ರಶಸ್ತಿಯನ್ನು ನಾನೇನೂ ಅಪೇಕ್ಷಿಸಿರಲಿಲ್ಲ. ಅಲ್ಲದೆ ಈ ಪ್ರಶಸ್ತಿಗಳನ್ನು ಪಡೆದಲ್ಲಿ ನಮ್ಮ ಘನತೆ ಅಥವಾ ಗೌರವ ಹೆಚ್ಚುವುದಿಲ್ಲ. ಆದರೆ ಜೀವನದಲ್ಲಿ ಏಳು ಮಾನವ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಜೀವನ ಸಾರ್ಥಕವಾಗುತ್ತದೆ ಎಂದ ಶ್ರೀಗಳು, ಸರ್ವರ ಸೇವೆಗಾಗಿ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಆಗ ಜೀವನ ಸುಗಮವಾಗಿಯೂ ಇರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 
 
ಪ್ರಶಸ್ತಿ ಸಮಾರಂಭ ವೇಳೆ, ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇತರೆ ಹಿರಿಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು. 
 
ಕಳೆದ ಏಪ್ರಿಲ್ 2ರಂದು ನವದೆಹಲಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ರದಾನ ಮಾಡಿದ  ಸಮಾರಂಭದಲ್ಲಿ ಶ್ರೀಗಳು ಆಯಾಸದ ಹಿನ್ನೆಲೆಯಲ್ಲಿ ಭಾಗವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಶಸ್ತಿಯನ್ನು ಇಂದು ಮಠದಲ್ಲಿಯೇ ಪ್ರದಾನ ಮಾಡಲಾಯಿತು. 

ವೆಬ್ದುನಿಯಾವನ್ನು ಓದಿ