ಕಿಸ್ ಆಫ್ ಲವ್‌ನಲ್ಲಿ ಶೋಭಾ ಕರಂದ್ಲಾಜೆ ತುಂಬಾ ಎಕ್ಸ್‌ಪರ್ಟ್: ಸೊರಕೆ

ಶನಿವಾರ, 22 ನವೆಂಬರ್ 2014 (17:15 IST)
ಕಿಸ್ ಆಫ್ ಲವ್ ವಿಚಾರವಾಗಿ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯಿಸಿದ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಶೋಭಾ ಬಗ್ಗೆ ನಾನು ಹೇಳಲಿಕ್ಕಿಲ್ಲ, ಅದರಲ್ಲಿ ಅವರು ಎಕ್ಸ್‌ಪರ್ಟ್ ಇದ್ದಾರೆ ಹಾಗಾಗಿ ನಾನು ಅದರ ಬಗ್ಗೆ ಹೇಳಲಿಕ್ಕಿಲ್ಲ ಎಂದು ಉಡುಪಿಯಲ್ಲಿ  ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
 
ಕಿಸ್ ಆಫ್ ಲವ್‌‍ಗೆ ಸಂಸದೆ ಶೋಭಾ ಕರಂದ್ಲಾಜೆ ವಿರೋಧ ವ್ಯಕ್ತಪಡಿಸಿ ಹೇಳಿಕೆ ನೀಡಿದ್ದರು.ನಿನ್ನೆ ಬ್ರಹ್ಮಾವರದಲ್ಲಿ ಬಿಜೆಪಿ ನಾಯಕರ ಪ್ರತಿಭಟನೆಯಲ್ಲಿ ಕಿಸ್ ಆಫ್ ಲವ್‌ಗೆ ವಿರೋಧ ವ್ಯಕ್ತಪಡಿಸುತ್ತಾ ಇದು ಭಾರತೀಯ ಸಂಸ್ಕೃತಿಗೆ ತಕ್ಕುದಲ್ಲ. ಈ ಬಗ್ಗೆ ಪೋಷಕರು ವಿರೋಧ ವ್ಯಕ್ತಪಡಿಸಬೇಕು ಎಂದು ಶೋಭಾ ಹೇಳಿದ್ದರು.

ಶೋಭಾ ಹೇಳಿಕೆಯನ್ನು ಕುರಿತು ಸೊರಕೆಯನ್ನು ಪ್ರಶ್ನಿಸಿದಾಗ ತಮ್ಮ ಮಾತಿನ ಬರದಲ್ಲಿ ಶೋಭಾ ಅದರಲ್ಲಿ ಎಕ್ಸ್‌ಪರ್ಟ್ ಆಗಿದ್ದಾರೆಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. 
 
 ಸರ್ಕಾರದಲ್ಲಿ ಒಂದು ಅನಾಗರಿಕ ಸರ್ಕಾರ ಮತ್ತು ಅನಾಗರಿಕ ಮಂತ್ರಿಗಳಿದ್ದಾರೆ. ಕಾಂಗ್ರೆಸ್ ಸಂಸ್ಕೃತಿಯೇ ಅಂತಹದ್ದಾಗಿದೆ  ಎಂದು ಸೊರಕೆ ಹೇಳಿಕೆಗೆ ಶೋಭಾ ಪ್ರತಿಕ್ರಿಯಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ