ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆತ

ಶುಕ್ರವಾರ, 22 ಏಪ್ರಿಲ್ 2016 (08:17 IST)
ರಾಜಕಾರಣಿಗಳ ಮೇಲೆ ಚಪ್ಪಲಿ, ಶೂ ಎಸೆಯುವುದು ಇತ್ತೀಚಿಗೆ ಸಾಮಾನ್ಯ ಎನಿಸಿಬಿಟ್ಟಿದೆ. ಆಗಾಗ ಇಂತಹ ಸಂಗತಿಗಳು ವರದಿಯಾಗುತ್ತಲೇ ಇರುತ್ತವೆ. ಆದರೆ ವಿಚಾರಣೆ  ಸಂದರ್ಭದಲ್ಲಿ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಖಂಡನೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
 
ನಗರದ 5ನೇ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ನಿನ್ನೆ ಶಂಕ್ರಪ್ಪ ಭಜಂತ್ರಿ ಎಂಬ ಕೊಲೆ ಆರೋಪಿಯ ವಿಚಾರಣೆ ನಡೆಯುತ್ತಿತ್ತು. ಸಿಆರ್‌ಪಿಎಫ್‍ನಲ್ಲಿ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಕುಂದಗೋಳದ ಬೆಟದೂರು ಗ್ರಾಮದವನಾದ  ಶಂಕ್ರಪ್ಪ, ರಜೆ ಮೇಲೆ ಊರಿಗೆ ಬಂದಾಗ ಪಿಸ್ತೂಲ್‍ನಿಂದ ಗುಂಡು ಹಾರಿಸಿ ಇಬ್ಬರನ್ನು ಹತ್ಯೆಗೈದಿದ್ದ.

ನಿನ್ನೆ ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ನಡೆಯುದ್ದಾಗ ನ್ಯಾಯಾಧೀಶ ಕಿರಣ್ ಗಂಗಣ್ಣವರ್ ಮೇಲೆ ಶಂಕ್ರಪ್ಪ ಚಪ್ಪಲಿ ಎಸೆದಿದ್ದಾನೆ.

ಬಹಳ ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಇದರಿಂದ ಬೇಸತ್ತ ಶಂಕ್ರಪ್ಪ ಈ ಕೃತ್ಯ ಎಸಗಿದ್ದಾನೆಂದು ಹೇಳಲಾಗುತ್ತಿದೆ. ಆದರೆ ಮಗ ಮಾನಸಿಕ ಅಸ್ವಸ್ಥ ಎಂದು ಆತನ ತಾಯಿ ಹೇಳಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ