ಕರ್ನಾಟಕದ ಇಬ್ಬರು ಯೋಧರ ಪಾರ್ಥಿವ ಶರೀರಗಳು ಸದ್ಯದಲ್ಲೇ ಹುಟ್ಟೂರಿಗೆ

ಶನಿವಾರ, 13 ಫೆಬ್ರವರಿ 2016 (14:17 IST)
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತದಿಂದ ಮೃತಪಟ್ಟ 9 ಯೋಧರ ಶವಗಳನ್ನು ಬೇಸ್ ಕ್ಯಾಂಪ್‌ ಲೆಹ್‌‍ಗೆ ರವಾನಿಸಲಾಗಿದೆ. ಮೈಸೂರು ಹೆಚ್.ಡಿಕೋಟೆ ಯೋಧ ಮಹೇಶ್, ಹಾಸನದ ಯೋಧ ನಾಗೇಶ್ ಅವರ ದೇಹಗಳು ಕೂಡ ಇವುಗಳಲ್ಲಿ ಸೇರಿದೆ. ನಾಳೆ ಬೆಳಿಗ್ಗೆ ಇವರ ದೇಹಗಳನ್ನು ದೆಹಲಿಗೆ ರವಾನಿಸಲಾಗುತ್ತದೆ. ಸಿಯಾಚಿನ್ ಪ್ರದೇಶದಲ್ಲಿ  ಪ್ರತಿಕೂಲ ಹವಾಮಾನದ ಕಾರಣದಿಂದ ಮೃತದೇಹಗಳನ್ನು ತೆಗೆಯಲು ವಿಳಂಬವಾಗಿತ್ತು.

 ಮಹೇಶ್ ಮತ್ತು ನಾಗೇಶ್ ಅವರ ಹುಟ್ಟೂರುಗಳಲ್ಲಿ ಅವರ ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಇವರಿಬ್ಬರ ಶರೀರಗಳು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ನಂತರ ಅವರ ಹುಟ್ಟೂರಿಗೆ ಕಳಿಸಲಾಗುತ್ತದೆ.

ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ಹಿಮಪಾತದಲ್ಲಿ 6 ದಿನಗಳು ಹೂತುಹೋಗಿದ್ದರೂ ಬದುಕುಳಿದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತೀವ್ರ ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದು,  ಅವರ ಅಂತ್ಯಕ್ರಿಯೆಯನ್ನು ಸಕಲ ಗೌರವದೊಂದಿಗೆ ನೆರವೇರಿಸಲಾಯಿತು. 

ವೆಬ್ದುನಿಯಾವನ್ನು ಓದಿ