ಸದನದಲ್ಲಿ ಸಿದ್ದು ವಾಚ್ ಕೋಲಾಹಲ?

ಮಂಗಳವಾರ, 1 ಮಾರ್ಚ್ 2016 (10:28 IST)
ಸಾಕಷ್ಟು ದಿನಗಳಿಂದ ವೈಯಕ್ತಿಕ ಕದನಕ್ಕೆ ಕಾರಣವಾಗಿದ್ದ ಸಿಎಂ ದುಬಾರಿ ವಾಚ್ ಈಗ ಸದನದಲ್ಲೂ ಸದ್ದು ಮಾಡಲಿದೆ. ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಬಿಜೆಪಿ ಸದಸ್ಯರು ಸಿಎಂ ಸಿದ್ದರಾಮಯ್ಯ ದುಬಾರಿ ವಾಚ್ ಪ್ರಕರಣವನ್ನೇ ತಮ್ಮ ಅಸ್ತ್ರವಾಗಿ ಬಳಸಿಕೊಳ್ಳಲು ತಯಾರಿ ನಡೆಸಿದ್ದಾರೆ.
 
ಸಿಎಂ ವಾಚ್ ಪ್ರಕರಣ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಿದೆ. ಪ್ರಕರಣಕ್ಕೆ  ಸಂಬಂಧಿಸಿದಂತೆ ಉಭಯ ಸದನಗಳಲ್ಲಿ ಬಿಜೆಪಿ ನಿಲುವಳಿ ಸೂಚನೆ ಮಂಡಿಸಲಿದ್ದು, ಈ ಕುರಿತು ದಿನವಿಡಿ ನಡೆಯುವ ಚರ್ಚೆಯಲ್ಲಿ ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
 
ಇಂದು ಬೆಳಗ್ಗೆ 11 ಗಂಟೆಗೆ ಕಲಾಪ ಆರಂಭವಾಗಲಿದೆ. ನಿಲುವಳಿ ಸೂಚನೆ ಮಂಡನೆಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವಕಾಶ ಕೊಟ್ಟರೆ ದಿನವಿಡಿ ಉಭಯ ಸದನಗಳಲ್ಲಿ ಕೋಲಾಹಲ ಉಂಟಾಗುವ ಸಾಧ್ಯತೆಗಳಿವೆ. ಇದಕ್ಕೆ ಆಡಳಿತ ಪಕ್ಷದ ಉತ್ತರವೇನು ಎನ್ನುವುದು ಒಂದು ಕಡೆಯಾದರೆ, ಇನ್ನೊಂದು ವಾಚ್ ವಿವಾದವನ್ನು ಹುಟ್ಟು ಹಾಕಿರುವ ಜೆಡಿಎಸ್ ನಡೆ ಕೂಡ ಕುತೂಹಲ ಕೆರಳಿಸಿದೆ.

ವೆಬ್ದುನಿಯಾವನ್ನು ಓದಿ