1ನೇ ತರಗತಿಯಿಂದಲೇ ಇಂಗ್ಲೀಷ್ ಪಠ್ಯ, ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್
ಬುಧವಾರ, 15 ಮಾರ್ಚ್ 2017 (14:10 IST)
ಚುನಾವಣೆ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಬಜೆಟ್`ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಏನೇನು ಸಿಕ್ಕಿದೆ ಎಂಬುದರ ಹೈಲೇಟ್ಸ್ ಇಲ್ಲಿದೆ.
ಸಿದ್ದರಾಮಯ್ಯ ಬಜೆಟ್`ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಿಕ್ಕಿದ್ದು
- ಒಂದನೇ ತರಗತಿಯಿಂದಲೇ ಇಂಗ್ಲೀಷ್ ಪಠ್ಯಭೋದನೆ
- ಸರ್ಕಾರಿ ಮತ್ತು ಅನುದಾನಿತ ವೈದ್ಯಕೀಯ, ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವವರಿಗೆ ಲ್ಯಾಪ್ ಟಾಪ್ ವಿತರಣೆ.1.5 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲ
- 6 ಹೊಸ ಮೆಡಿಕಲ್ ಕಾಲೇಜು
- ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಜೀವನ ಕ್ರಮ ಆಧರಿತ ರೋಗಗಳ ಚಿಕಿತ್ಸೆಗೆ ದಾವಣಗೆರೆ, ತುಮಕೂರು, ರಾಮನಗರ, ವಿಜಯಪುರ, ಕೋಲಾರದಲ್ಲಿ ತಲಾ 25 ಕೋಟಿ ವೆಚ್ಚದಲ್ಲಿ 5 ಹೊಸ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ
- ಅಂಗನವಾಡಿ ಮಕ್ಕಳಿಗೆ 2 ದಿನ ಮೊಟ್ಟೆ, 5 ದಿನ ಹಾಲು ವಿತರಣೆ
- ಶೂ ಮತ್ತು ಸಾಕ್ಸ್ ವಿತರಣೆ
- 8 ರಿಂದ 10ನೇ ತರಗತಿ ಹೆಣ್ಣುಮಕ್ಕಳಿಗೆ ಚೂಡಿದಾರ್ ಸಮವಸ್ತ್ರ
- ಉನ್ನತ ಶಿಕ್ಷಣ ಇಲಾಖೆಗೆ 4,401 ಕೋಟಿ ರೂ. ಅನುದಾನ
- ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ತಲಾ 4 ಕೋಟಿ ರೂ. ವೆಚ್ಚದಲ್ಲಿ 25 ಹೊಸ ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆ
- ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೆಳ್ಳಿ ಹಬ್ಬದ ಹಿನ್ನೆಲೆಯಲ್ಲಿ 25 ಕೋಟಿ ರೂ ಅನುದಾನ
- `ಜನೌಷಧಿ ಔಷಧಿ ಮಳಿಗೆಗಳ’ ಯೋಜನೆಯಡಿ 200 ಹೊಸ ಜೆನಿರಿಕ್ ಔಷಧಿ ಮಳಿಗೆಗಳ ಆರಂಭ
- - 114 ತಾಲೂಕು ಕೇಂದ್ರಗಳಲ್ಲಿ ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ
- ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ 145 ಚಿಕಿತ್ಸಾ ಕೇಂದ್ರಗಳ ಸ್ಥಾಪನೆ