ಸಿಎಂ ಮತಹಾಕುವ ಮತಗಟ್ಟೆಯಲ್ಲಿ ಹಾವು ಪ್ರತ್ಯಕ್ಷ

ಶನಿವಾರ, 20 ಫೆಬ್ರವರಿ 2016 (13:14 IST)
ಸಿಎಂ ಸಿದ್ದರಾಮಯ್ಯ ಮತಹಾಕಲು ಬರಲಿದ್ದ ಮತಗಟ್ಟೆಯಲ್ಲಿ ಹಾವೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮೈಸೂರಿನ ವರುಣಾ ಕ್ಷೇತ್ರ ವ್ಯಾಪ್ತಿಯಡಿ ಬರುವ ಸಿದ್ದರಾಮಹುಂಡಿ ಮತಗಟ್ಟೆಯಲ್ಲಿ ನಡೆದಿದೆ. 
 
ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದರಾಮಹುಂಡಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಮತಗಟ್ಟೆಯಲ್ಲಿ 1.30ಕ್ಕೆ ಮತ ಚಲಾಯಿಸಲು ಬರುತ್ತಿರುವ ಹಿನ್ನೆಲೆಯಲ್ಲಿ ತಪಾಸಣೆಯನ್ನು ಕೈಗೊಳ್ಳಲಾಯಿತು. ಆ ಸಂದರ್ಭದಲ್ಲಿ ಶಾಲೆಯ ಅಡುಗೆ ಕೋಣೆಯ ಹಿಂಭಾಗದಲ್ಲಿ ಹಾವೊಂದು ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳದಲ್ಲಿ ಸ್ವಲ್ಪ ಸಮಯ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅದೊಂದು ರೈತ ಸ್ನೇಹಿ ಹಾವಾಗಿದ್ದು, ಅದರಿಂದ ಯಾವುದೇ ಅಪಾಯವಿರಲಿಲ್ಲ. ಆದರೆ ಸ್ಥಳೀಯರು ಅನಗತ್ಯವಾಗಿ ಅದನ್ನು ಕೊಂದು ಹಾಕಿದ್ದಾರೆ. 
 
ಮತ ಹಾಕಲು ಬೆಂಗಳೂರಿನಿಂದ ಹೊರಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿದ್ದರಾಮಹುಂಡಿ ಮತಗಟ್ಟೆಯಲ್ಲಿ ಮತ ಹಾಕಲು ಬರುತ್ತಾರೆಂದು ಸೂಚನೆ ಲಭಿಸಿದೆ.

ವೆಬ್ದುನಿಯಾವನ್ನು ಓದಿ