ಹಣಕ್ಕೆ ಒತ್ತಾಯಿಸಿ ತಂದೆಯನ್ನು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ ಮಕ್ಕಳು

ಶನಿವಾರ, 30 ಆಗಸ್ಟ್ 2014 (15:38 IST)
ಬೆಂಗಳೂರಿನ ಗಿರಿನಗರದಲ್ಲಿ ಅಪ್ಪನನ್ನೇ ಮಕ್ಕಳು ಕೂಡಿ ಹಾಕಿ ಚಿತ್ರಹಿಂಸೆ ನೀಡಿದ  ಅಮಾನುಷ ಘಟನೆ ಸಂಭವಿಸಿದೆ. ವೆಂಕಟೇಶ್ ನಿವೃತ್ತ ಎಎಸ್‌ಐಯಾಗಿದ್ದು, ನಿವೃತ್ತಿನಂತರ ಅವರಿಗೆ  ಪಿಂಚಣಿ ಹಣ 20 ಲಕ್ಷ ರೂ. ಬಂದಿತ್ತು.

ಅವರು ಸ್ವಂತ ಮನೆಯಲ್ಲಿದ್ದು, 50ರಿಂದ 60 ಸಾವಿರ ಬಾಡಿಗೆ ಬರುತ್ತದೆ. ಇಷ್ಟೆಲ್ಲಾ ಆಸ್ತಿ ಮಾಡಿದ್ದರೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಮಕ್ಕಳು ಮತ್ತು ಮತ್ತು ವೆಂಕಟೇಶ್ ಪತ್ನಿ ವೆಂಕಟೇಶ್ ಅವರನ್ನು  ನಾಯಿಗೆ ಕಟ್ಟುವ  ಕಬ್ಬಿಣದ ಸರಪಳಿಯಿಂದ ಕೂಡಿಹಾಕಿ ನಿವೃತ್ತಿಯ ಹಣ ನೀಡುವಂತೆ ಒತ್ತಾಯಿಸಿ, ಚಿತ್ರಹಿಂಸೆ ನೀಡಿದ್ದರು.  ಮನೆ ಕಟ್ಟಲು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು.

ಗಿರಿನಗರ ಪೊಲೀಸರಿಗೆ ಈ ವಿಷಯ ತಿಳಿದು ವೆಂಕಟೇಶ್ ಅವರನ್ನು ರಕ್ಷಿಸಿದ್ದಾರೆ.  ನನ್ನ ಮಕ್ಕಳು ಆರ್ಥಿಕವಾಗಿ ಚೆನ್ನಾಗಿದ್ದಾರೆ. ಹಣವನ್ನು ನನ್ನ ಸಹೋದರನಿಗೆ ಹಂಚುತ್ತೇನೆಂದು ಅನುಮಾನದಿಂದ ಪತಿ, ಮಕ್ಕಳು ತನ್ನ ಜೊತೆ ಈ ರೀತಿ ಅಮಾನುಷವಾಗಿ ವರ್ತಿಸಿದ್ದಾರೆ. ತಮ್ಮ ನನ್ನ ಮನೆಯಲ್ಲೇ ಓದಿ ಬೆಳೆದಿದ್ದ. ನನ್ನ ಸಹೋದರನನ್ನು ಕಂಡರೆ ಪತ್ನಿ, ಮಕ್ಕಳಿಗೆ ಆಗುತ್ತಿರಲಿಲ್ಲ ಎಂದು ವೆಂಕಟೇಶ್ ಟಿವಿವಾಹಿನಿಗೆ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ