ಪರಿಚಿತರ ಮನೆಯಲ್ಲಿ ಚಿನ್ನ ಕದಿಯುತ್ತಿದ್ದ ಸಾಫ್ಟವೇರ್ ಕಳ್ಳಿ ಬಂಧನ

ಗುರುವಾರ, 22 ಮೇ 2014 (18:03 IST)
ಸ್ನೇಹಿತರು ಮತ್ತು ಪರಿಚಿತರ ಮನೆಗೆ ಹೋಗಿ ಚಿನ್ನಾಭರಣ ದೋಚುತ್ತಿದ್ದ ಸಾಫ್ಟ್‌ವೇರ್ ಉದ್ಯೋಗಿ ಎಲಿಜಬೆತ್ ಎಂಬವಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಚಿತರ ಜತೆ ಆತ್ಮೀಯವಾಗಿ ವರ್ತಿಸುತ್ತಿದ್ದ ಯುವತಿ ನಂತರ ಚಿನ್ನಾಭರಣವನ್ನು ಬಹಳ ಬುದ್ಧಿವಂತಿಕೆಯಿಂದ ಕಳ್ಳತನ ಮಾಡುತ್ತಿದ್ದಳು.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರಿಂದ ಅವಳು ಕಳ್ಳತನ ಮಾಡಿದ್ದಾಳೆಂದರೆ ಯಾರೂ ನಂಬುತ್ತಿರಲಿಲ್ಲ. ಪೊಲೀಸರು ಅವಳ ಬಳಿಯಿದ್ದ ಕದ್ದ ಮಾಲನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ.

ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರೂ ಚಿನ್ನಾಭರಣಗಳನ್ನು ಕಳ್ಳತನ ಮಾಡುವುದನ್ನು ಯುವತಿ ಹವ್ಯಾಸವಾಗಿ ಮಾಡಿಕೊಂಡಿದ್ದಳು.

ವೆಬ್ದುನಿಯಾವನ್ನು ಓದಿ