ಯೋಧ ಹನುಮಂತಪ್ಪ ಕುಟುಂಬ ದೆಹಲಿಗೆ

ಮಂಗಳವಾರ, 9 ಫೆಬ್ರವರಿ 2016 (15:31 IST)
ಸಿಯಾಚಿನ್‌ನ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಾವನ್ನು ಗೆದ್ದು ಬಂದಿರುವ ಕರ್ನಾಟಕದ ಯೋಧ, ಲ್ಯಾನ್ಸ್ ನಾಯಕ್  ಹನುಮಂತಪ್ಪ ಕೊಪ್ಪದ ಅವರನ್ನು ಭೇಟಿಯಾಗಲು ಕುಟುಂಬ ನವದೆಹಲಿಗೆ ಪ್ರಯಾಣ ಬೆಳೆಸಿದೆ.

ಕುಂದಗೋಳ ತಾಲ್ಲೂಕಿನ ಬೆಟ್ಟದೂರಿನ ನಿವಾಸಿಯಾಗಿರುವ ಹನುಮಂತಪ್ಪ ತಾಯಿ ಬಸಮ್ಮ, ಪತ್ನಿ ಜಯಮ್ಮ , ಸಹೋದರ, ಅಳಿಯ, ಒಂದುವರೆ ವರ್ಷದ ಮಗಳು ನೇತ್ರಾ ಗೋವಾಕ್ಕೆ ರಸ್ತೆ ಮಾರ್ಗದ ಮೂಲಕ ಸಾಗಿ ಅಲ್ಲಿಂದ ವಿಮಾನದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. 
 
ಕುಂದಗೋಳ ಶಾಸಕ ಸಿ.ಎಲ್.ಶಿವಳ್ಳಿ ಯೋಧನ ಕುಟುಂಬ ನವದೆಹಲಿಗೆ ತಲುಪಲು ವ್ಯವಸ್ಥೆ ಮಾಡಿದ್ದಾರೆ.
 
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ನಡೆದ ಹಿಮಪಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ  ಲ್ಯಾನ್ಸ್ ನಾಯಕ್ ಹನುಮಂತಪ್ಪ ನಿನ್ನೆ ರಾತ್ರಿ ಜೀವಂತವಾಗಿ ಪತ್ತೆಯಾಗಿದ್ದರು. ಸತತ ಆರು ದಿನಗಳ ಕಾಲ 25 ಅಡಿ ಆಳದಲ್ಲಿ -45 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿದ್ದರಿಂದ ದೇಹ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ನವದೆಹಲಿಯ ಆರ್. ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
 
ಪ್ರಧಾನಿ ಮೋದಿಯವರು ಸಹ ಯೋಧನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದ್ದರು.

ವೆಬ್ದುನಿಯಾವನ್ನು ಓದಿ