ಡಿಕೆಶಿ ಅಕ್ರಮಗಳ ತನಿಖೆಗೆ ವಿಶೇಷ ಕೋರ್ಟ್ ಸ್ಥಾಪನೆಗೆ ಒತ್ತಾಯ

ಗುರುವಾರ, 2 ಅಕ್ಟೋಬರ್ 2014 (17:54 IST)
ಭ್ರಷ್ಟ, ಅನೈತಿಕ ರಾಜಕೀಯದ ರೂಪ ಡಿ.ಕೆ. ಶಿವಕುಮಾರ್.  ಇಂಧನ ಸಚಿವರ ಅಕ್ರಮಗಳ ಬಗ್ಗೆ ವಿಚಾರಣೆಗೆ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಒತ್ತಾಯಿಸಿ ಅಭಿಯಾನ ಮಾಡುವುದಾಗಿ ಸಮಾಜ ಪರಿವರ್ತನೆ ಸಂಘಟನೆಯ ಅಧ್ಯಕ್ಷ ಎಸ್.ಆರ್. ಹಿರೇಮಠ್ ಹುಬ್ಬಳ್ಳಿಯಲ್ಲಿ  ಹೇಳಿದ್ದಾರೆ.

18 ವರ್ಷಗಳು ವಿಚಾರಣೆ ನಡೆದು ಜಯಲಲಿತಾ ಸಿಎಂ ಕುರ್ಚಿಯಿಂದ ಕೆಳಕ್ಕಿಳಿದು ಪರಪ್ಪನ ಅಗ್ರಹಾರ ಸೇರಿದರು. ಲಕ್ಷಾನುಗಟ್ಟಲೆ ಅಕ್ರಮಗಳ ಸಂಪಾದನೆಯನ್ನು ಡಿಕೆಶಿ ಮಾಡಿದ್ದಾರೆ. ಮೊದಲ ಹೆಜ್ಜೆಯಾಗಿ ಹೊಸದಾಗಿ ಬಂದ ಪ್ರಧಾನಮಂತ್ರಿಗಳಿಗೆ, ಸೋನಿಯಾಗಾಂಧಿಗೆ, ರಾಜ್ಯಪಾಲರಿಗೆ ವಿಶೇಷ ಕೋರ್ಟ್ ಸ್ಥಾಪಿಸುವಂತೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ನಂತರ ಬಿಜೆಪಿ ಬಗ್ಗೆ ಮಾತನಾಡುತ್ತಾ ತಮ್ಮ ಪಕ್ಷದ ಭ್ರಷ್ಟಾಚಾರಿಗಳನ್ನು ಹೊರಗಿಡಲಿ. ಬಹಿರಂಗ ಶುದ್ಧಿಗಿಂತ ಅಂತರಂಗ ಶುದ್ಧಿ ಬಹಳ ಮುಖ್ಯ. ಮೊದಲನೆಯದಾಗಿ ಯಡಿಯೂರಪ್ಪ ಮತ್ತು ಸದಾನಂದಗೌಡ ಇಬ್ಬರನ್ನೂ ಮನೆಗೆ ಕಳಿಸಬೇಕು ಎಂದು ವಾಗ್ದಾಳಿ ಮಾಡಿದರು. 

ವೆಬ್ದುನಿಯಾವನ್ನು ಓದಿ