ಈ ಹಿಂದೆ ಮೇ 15ಕ್ಕೆ ಎಸ್ಎಸ್ಎಲ್ಸಿ ರಿಸಲ್ಟ್ನ್ನು ಪ್ರಕಟಿಸಲಾಗುತ್ತದೆ ಎಂದಿದ್ದ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹಠಾತ್ ಫಲಿತಾಂಶದ ದಿನವನ್ನು ಬದಲಾಯಿಸಿದ್ದು, 3 ದಿನ ಮುಂಚಿತವಾಗಿ ಅಂದರೆ ಮೇ 12 ಸೋಮವಾರದಂದು ರಿಸಲ್ಟ್ ಪ್ರಕಟವಾಗಲಿದೆ ಎಂದು ಮಾಹಿತಿ ನೀಡಿದೆ.
ಇಲಾಖೆಯ ಅಧಿಕೃತ ವೆಬ್ಸೈಟ್ http://karresults.nic.in/ ನಲ್ಲಿ ಸೋಮವಾರ ಫಲಿತಾಂಶವನ್ನು ಪಡೆಯಬಹುದು.
ರಾಜ್ಯದ ಎಸ್ಸೆಸ್ಸೆಲ್ಸಿ ಪರೀಕ್ಷೆ ಮಾರ್ಚ್ 28, 2014 ರಿಂದ ಏಪ್ರಿಲ್ 9 ರವರೆಗೆ ನಡೆದಿತ್ತು.