ಸರ್ಕಾರ ಸಮಸ್ಯೆಗಳಿಗೆ ಸ್ಪಂಧಿಸದೆ ನಿದ್ರೆ ಮಾಡುತ್ತಿದೆ: ಅಶೋಕ್

ಶನಿವಾರ, 27 ಜೂನ್ 2015 (14:50 IST)
ಬೆಳಗಾವಿಯಲ್ಲಿ ನಡೆಯಲಿರುವ ಮುಂಗಾರು ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸಭಾ ವಿರೋಧ ಪಕ್ಷವಾಗಿರುವ ಬಿಜೆಪಿ ನಗರದ ಟೌನ್ ಹಾಲ್‌ನಲ್ಲಿರುವ ಪುರಭವನದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದೆ. 
 
ಪ್ರತಿಭಟನೆಯು ಪಕ್ಷದ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಅವರ ನೇತೃತ್ವದಲ್ಲಿ ನಡೆಯುತ್ತಿದ್ದು, ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗುತ್ತಿರುವ ಪ್ರತಿಭಟನಾಕಾರರು, ಆಡಳಿತ ಸುವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಇನ್ನು ಮಾಧ್ಯಮಗಳೊಂದಿಗೆ ಅಶೋಕ್ ಮಾತನಾಡಿದ್ದು, ರಾಜ್ಯದವಲ್ಲಿರುವ ಕಾಂಗ್ರೆಸ್ ಸರ್ಕಾರ ಕುಂಭಕರ್ಣ ಸರ್ಕಾರವಾಗಿದ್ದು, ನಿದ್ದೆ ಮಾಡುತ್ತಿದೆ. ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ಕಾನೂನು ಸುವ್ಯವಸ್ಥೆ, ಹಣಕಾಸಿನ ಸ್ಥಿತಿ ಹೀಗೆ ಯಾವುದನ್ನೂ ಕೂಡ ಸುಧಾರಿಸುಂತಹ ಆಳಿತ ನಡೆಸುತ್ತಿಲ್ಲ. ಆದ್ದರಿಂದ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಬಡಿದೆಬ್ಬಿಸಲಿದ್ದೇವೆ ಎಂದರು.
 
ಸಿಎಂ ಸಿದ್ದರಾಮಯ್ಯನವರು ಗೊರಕೆ ಹೊಡೆಯುತ್ತಿದ್ದಾರೆ ಎಂದ ಅವರು, ಸರ್ಕಾರ ಯಾವ ಸಮಸ್ಯೆಯನ್ನೂ ಕೂಡ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅಲ್ಲದೆ ಸರ್ಕಾರ ಸಂಪೂರ್ಣ ನಿದ್ರೆಯಲ್ಲಿದ್ದು, ಅದನ್ನು ಎಬ್ಬಿಸುವ ಕಾರ್ಯವನ್ನು ನಾವು ಮಾಡುತ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಎಲ್ಲವೂ ಸಾಧ್ಯವಾಗಲಿದೆ. ಈ ಹಿನ್ನೆಲೆಯ್ಲಲಿಯೇ ಇಂದು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು. 
 
ಪ್ರತಿಭಟನೆಯಲ್ಲಿ ಶಾಸಕ ಸುರೇಶ್ ಕುಮಾರ್ ಸೇರಿದಂತೆ ಬೆಂಗಳೂರಿನ ಇತರೆ ಬಿಜೆಪಿ ಶಾಸಕರು ಭಾಗವಹಿಸುವ ಮೂಲಕ ಅಶೋಕ್ ಅವರಿಗೆ ಸಾಥ್ ನೀಡಿದ್ದರು. ಇನ್ನು ಇದೇ 28ರಿಂದ ಬೆಳಗಾವಿಯಲ್ಲಿ ಮುಂಗಾರು ಅಧಿವೇಶನ ನಡೆಯಲಿದೆ. 

ವೆಬ್ದುನಿಯಾವನ್ನು ಓದಿ