ಪೊಲೀಸರೇನು ಮನುಷ್ಯರೋ... ಪಶುಗಳೋ; ಮಂಜುಳಾ ಮಾನಸ

ಮಂಗಳವಾರ, 2 ಆಗಸ್ಟ್ 2016 (17:49 IST)
ಧಾರವಾಡ ಜಿಲ್ಲೆ ಯಮನೂರು ಲಾಠಿ ಚಾರ್ಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೇನು ಮನುಷ್ಯರೇ ಅಥವಾ ಪಶುಗಳೇ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ಗುಡುಗಿದ್ದಾರೆ.
 
ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಯಮನೂರಿಗೆ ಭೇಟಿ ನೀಡಿದ ಮಂಜುಳಾ ಮಾನಸ ಅವರು ಲಾಠಿ ಚಾರ್ಚ್‌ನಲ್ಲಿ ಏಟು ತಿಂದು ಅಸ್ವಸ್ತರಾಗಿರುವ ರೈತರು, ಮಹಿಳೆಯರು ಮನೆಗೆ ತೆರಳಿ ಅವರ ಪರಿಸ್ಥಿತಿ ಕುರಿತು ವಿಚಾರಿಸಿಕೊಂಡರು. ಈ ವೇಳೆ ತಮ್ಮ ನೋವನ್ನು ಹೇಳಿಕೊಳ್ಳಲು ಯಮನೂರು ಗ್ರಾಮಸ್ಥರು ಮುಗಿಬಿದ್ದಿದ್ದರು.
 
ಬಳಿಕ ಸುದ್ದಿಗಾರರೊಂದಿಗೆ ಮತನಾಡಿದ ಅವರು, ಮಹಾದಾಯಿ ನ್ಯಾಯಾಧೀಕರಣದ ತೀರ್ಪು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಪೊಲೀಸರು ಮಹಿಳೆ ಮಕ್ಕಳು ಎನ್ನದೆ ಅಮಾಯಕರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ. ನಾನು ಇಂತಹ ಹೀನ ಮನಸ್ಥಿತಿ ಪೊಲೀಸರನ್ನು ನೋಡಿರಲಿಲ್ಲ. ಇವರೇನು ಪೊಲೀಸರೋ ಅಥವಾ ಪಶುಗಳೋ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಮಹದಾಯಿ ನ್ಯಾಯಾಧೀಕರಣದಲ್ಲಿ ರಾಜ್ಯಕ್ಕೆ ಹಿನ್ನೆಡೆಯಾಗಿದೆ ಎಂದು ಆಕ್ರೋಶಗೊಂಡ ರೈತರು ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ, ಧಾರವಾಡ ಪೊಲೀಸರು ಪ್ರತಿಭಟನಾ ನಿರತ ರೈತರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ