ಆರ್ಕಿಡ್ಸ್ ಶಾಲೆಯ ಮುಖ್ಯಸ್ಥರಿಗೆ ಸಮನ್ಸ್ ಜಾರಿ

ಬುಧವಾರ, 22 ಅಕ್ಟೋಬರ್ 2014 (15:20 IST)
ಶಾಲಾ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಕಿಡ್ಸ್ ಶಾಲೆಯ ಪೋಷಕರು ಪೊಲೀಸ್ ಆಯುಕ್ತ ಎಂ.ಎನ್. ರೆಡ್ಡಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಶನಿವಾರದೊಳಗೆ ತನಿಖೆ ಪೂರ್ಣಗೊಳಿಸುವ ಭರವಸೆಯನ್ನು ಪೋಷಕರಿಗೆ ನೀಡಿದರು.

ಈ ನಡುವೆ ಶಾಲಾ ಆಡಳಿತ ಮಂಡಳಿಯ ಕೆಲವು ಕ್ರಮಗಳ ಬಗ್ಗೆ ಆಯುಕ್ತರಿಗೆ ಪೋಷಕರು ದೂರು ನೀಡಿದರು. ಈ ನಡುವೆ ಆರ್ಕಿಡ್ಸ್ ಶಾಲೆ ಮುಖ್ಯಸ್ಥರಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ಶಾಲೆಯ ಮುಖ್ಯಸ್ಥ ಹೈದರಾಬಾದಿನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.  
 
ಏತನ್ಮಧ್ಯೆ,  ಶಾಲಾ ಆಡಳಿತ ಮಂಡಳಿ ಲಿಖಿತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಶಾಲೆಗೆ ಬೆಳಿಗ್ಗೆ 8.30ಕ್ಕೆ ಮಗು ಆಗಮಿಸಿದೆ. 12.30ಕ್ಕೆ ಶಾಲೆಯಿಂದ ಮಗು ವಾಪಸ್ ತೆರಳಿದೆ. ಪ್ರತಿ ಕ್ಷಣವೂ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಶಾಲೆಯ ಆವರಣಕ್ಕೆ ಯಾವುದೇ ಹೊರಗಿನ ವ್ಯಕ್ತಿ ಪ್ರವೇಶಿಸಿಲ್ಲ. ಮಗು ಮೂರು ಬಾರಿ ತರಗತಿಯಿಂದ ಹೊರಗೆ ಬಂದಿದೆ. ಪ್ರತಿ ನರ್ಸರಿ ಕ್ಲಾಸ್‌ರೂಂಗೆ ಒಬ್ಬ ಶಿಕ್ಷಕ, ಒಬ್ಬ ಸಹ ಶಿಕ್ಷಕ ಮತ್ತು ಆಯಾರನ್ನು ನೇಮಿಸಲಾಗಿದೆ ಎಂದು ತಿಳಿಸಿದೆ.

ವೆಬ್ದುನಿಯಾವನ್ನು ಓದಿ