ಟೋಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಸಮನ್ಸ್

ಮಂಗಳವಾರ, 6 ಮೇ 2014 (14:45 IST)
ಏರ್‌ಪೋರ್ಟ್ ರಸ್ತೆ ಟೋಲ್ ದರವನ್ನು ನಾಲ್ಕು ಪಟ್ಟು ಹೆಚ್ಚಿಸಿದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,  ನವಯುಗ ಸಂಸ್ಥೆಗೆ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಿದೆ. ಲಕ್ಷ್ಮೀಪತಿ ಎಂಬವರು ಈ ಕುರಿತು ಪಿಐಎಲ್ ಸಲ್ಲಿಸಿದ್ದರು. ಈ ನಡುವೆ ಟೋಲ್‌ ಶುಲ್ಕ ಹೆಚ್ಚಳ ವಿವಾದ ಕುರಿತು ಚರ್ಚಿಸಲು  ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆಯನ್ನು ಸಚಿವ ಮಹದೇವಪ್ಪ ಕರೆದಿದ್ದಾರೆ.

ಎಲ್ಲರೂ ಟೋಲ್ ರಸ್ತೆ ಬಳಸಬೇಕಿಲ್ಲ. ಸರ್ವೀಸ್ ರಸ್ತೆ ಬಳಸಲು ಅವಕಾಶವಿದೆ ಎಂದು ಸಭೆಗೆ ಮುನ್ನ ಮಹದೇವಪ್ಪ ಹೇಳಿದರು. ಸಂಸತ್‌ನಲ್ಲಿ ಟೋಲ್ ದರ ಹೆಚ್ಚಳದ ಬಿಲ್ ಪಾಸಾಗಿದ್ದು, ಬಿಲ್ ಅನ್ವಯ ಟೋಲ್ ದರ ಹೆಚ್ಚಿಸಿದ್ದೇವೆ ಎಂದು ಸಚಿವ ಮಹದೇವಪ್ಪ ಸಮಜಾಯಿಷಿ ನೀಡಿದ್ದಾರೆ.

ಈ ನಡುವೆ ಟೋಲ್ ದರ ಹೆಚ್ಚಳವನ್ನು ವಿರೋಧಿಸಿ ಬಿಜೆಪಿ, ಕರವೇ ಕಾರ್ಯಕರ್ತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ಮಾಡಿದರು.

ವೆಬ್ದುನಿಯಾವನ್ನು ಓದಿ