ಕ್ಯುರೇಟೀವ್ ಅರ್ಜಿ ತಿರಸ್ಕಾರ: ಯಾಕುಬ್‌ಗೆ ನಾಳೆ 7ಕ್ಕೆ ಗಲ್ಲು ಸಾಧ್ಯತೆ ?!

ಬುಧವಾರ, 29 ಜುಲೈ 2015 (16:54 IST)
1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಯಾಕುಬ್ ಮೊನೆನ್ ತಾನು ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ ಕಾನೂನಿ ಕೊನೇ ಹೋರಾಟದಲ್ಲಿಯೂ ಕೂಡ ಸೋಲನ್ನು ಅನುಭವಿಸಿದ್ದಾರೆ. 
 
ಗಲ್ಲು ಶಿಕ್ಷೆಗೆ ಗುರಿಯಾದ ಹಿನ್ನೆಲೆಯಲ್ಲಿ ಯಾಕುಬ್ ಯಾಕುಬ್, ತನ್ನ ವಿರುದ್ಧ ಜಾರಿಗೊಳಿಸಲಾಗಿರುವ ತೀರ್ಪನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ ನ್ಯಾ.ಡಿ.ಮಿಶ್ರಾ ಅವರ ನೇತೃತ್ವದ ತ್ರಿ ಸದಸ್ಯ ಪೀಠ ಮನವಿಯನ್ನು ತಿರಸ್ಕರಿಸಿದೆ. 
 
ಇನ್ನು ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳು ನಿನ್ನೆಯೇ ವಿಚಾರಣೆ ನಡೆಸಿದ್ದರು. ಆದರೆ ನಿನ್ನೆ ನಿರ್ಧಾರ ಕೈಗೊಳ್ಳುವ ವೇಳೆಯಲ್ಲಿ ಭಿನ್ನಾಭಿಪ್ರಾಯ ತಲೆದೋರಿದ್ದ ಹಿನ್ನೆಲೆಯಲ್ಲಿ ಪ್ರಕರಣವನ್ನು ಇಂದಿ ಮುಂದೂಡಲಾಗಿತ್ತು. 
 
ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಮುಖ್ಯ ನ್ಯಾಯಾಮೂರ್ತಿ ಹೆಚ್.ಎಲ್.ದತ್ತು ಅವರು ಮೂರು ಮಂದಿ ನ್ಯಾಯಾಧೀಶರನ್ನು ಒಳಗೊಂಡಿರುವ ವಿಸ್ತೃತ ಪೀಠವನ್ನು ರಚಿಸಿ ಅರ್ಜಿಯ ವಿಚಾರಣೆ ನಡೆಸಲು ಸೂಚಿಸಿದ್ದರು. ಆದ್ದರಿಂದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ. ಮಿಶ್ರಾ, ಎ.ಮಿಶ್ರಾ ಹಾಗೂ ನ್ಯಾ.ಪಿ.ಸಿ.ಪಂತ್ ಅವರಿದ್ದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಿ ಅರ್ಜಿಯನ್ನು ತಿರಸ್ಕರಿಸಿದೆ. 
 
ಸುಪ್ರೀಂ ಕೋರ್ಟ್ ನೀಡಿರುವ ಆದೇಶಗಳನ್ನು ನನ್ನ ಪ್ರಕರಣದಲ್ಲಿ ಪಾಲಿಸಿಲ್ಲ. ಅಲ್ಲದೆ ಮುಂಬೈನ ಟಾಡಾ ಕೋರ್ಟ್ ಕಾನೂನು ಬಾಹಿರವಾಗಿ ಗಲ್ಲು ಶಿಕ್ಷೆ ವಿಧಿಸಿದೆ. ಆದರೆ ಈ ಹಿಂದಿನ ಪ್ರಕರಣಗಳನ್ನು ಪರಿಶೀಲಿಸಿದಲ್ಲಿ ಅತ್ಯಂತ ಘೋರ ಪ್ರಕರಣದಲ್ಲಿ ಭಾಗಿಯಾದಲವರಿಗೆ ಗಲ್ಲು ಶಿಕ್ಷೆಯಾಗಿದ್ದರೂ ಕೂಡ ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿ ಯಾಕುಬ್ ಅರ್ಜಿ ಸಲ್ಲಿಸಿದ್ದ. ಈತನನ್ನು ಜುಲೈ 30ರಂದು ಗಲ್ಲಿಗೇರಿಸಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ.
 
ಇನ್ನು ಯಾಕುಬ್ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿಗಳು ಈಗಾಗಲೇ ಒಮ್ಮೆ ತಿರಸ್ಕರಿಸಿದ್ದಾರೆ. ಆದರೆ ಯಾಕುಬ್ ಮತ್ತೊಮ್ಮೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಿದ್ದ. ಆದರೆ ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿಯವರು ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಚಾರದ ಮೇಲೆ ವಿಷಯ ನಿರ್ಧರಿತವಾಗಲಿದೆ. ಆದರೆ ನಾಳೆ ಗಲ್ಲು ಶಿಕ್ಷೆ ವಿಧಿಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.  

ವೆಬ್ದುನಿಯಾವನ್ನು ಓದಿ