10 ಕೋಟಿ ಕೊಡುವ ಬದಲು ಹೇಳಿಕೆ ಹಿಂಪಡೆಯಿರಿ: ಆರ್.ಅಶೋಕ್ ಸೂಚನೆ

ಶನಿವಾರ, 5 ಸೆಪ್ಟಂಬರ್ 2015 (16:39 IST)
ತಮ್ಮನ್ನು ಬಿಜೆಪಿ ನಾಯಕರು ಅಪಹರಿಸಲು ಪ್ರಯತ್ನಿಸುತ್ತಿದ್ದು ಆಪರೇಶನ್ ಕಮಲ ಮಾಡುವ ಯತ್ನದಲ್ಲಿದ್ದಾರೆ ಎಂದು ಆರೋಪಿಸಿದ್ದ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕ ಆರ್.ಅಶೋಕ್ ಅವರು ಬಿಬಿಎಂಪಿಯ ಕಾಂಗ್ರೆಸ್ ಕಾರ್ಪೊರೇಟರ್ ಆರ್.ಪದ್ಮಾವತಿ ಅವರಿಗೆ ಇಂದು ಲೀಗಲ್ ನೋಟಿಸ್ ಜಾರಿಗೊಳಿಸಿದ್ದು, ಆರೋಪವನ್ನು ಹಿಂಪಡೆಯುವಂತೆ ಸೂಚಿಸಿದ್ದಾರೆ. 
 
ಉನ್ನತ ಮೂಲಗಳ ಪ್ರಕಾರ, ಅಶೋಕ್ ಅವರು ತಮ್ಮ ವಕೀಲರಿಂದ ಈ ಲಿಗಲ್ ನೋಟಿಸ್‌ನ್ನು ಕಳುಹಿಸಿದ್ದು, ತಮ್ಮ ವಿರುದ್ಧ ನಿನ್ನೆ ಮಾಧ್ಯಮಗಳೆದುರು ನೀಡಿದ್ದ ಹೇಳಿಕೆಯನ್ನು ಹಿಂಪಡೆಯಿರಿ. ಇಲ್ಲವಾದಲ್ಲಿ 10 ಕೋಟಿ ರೂ. ಬೇಡಿಕೆಯೊಂದಿಗೆ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂಬುದಾಗಿ ಪದ್ಮಾವತಿ ಅವರನ್ನು ಎಚ್ಚರಿಸಿದ್ದಾರೆ ಎನ್ನಲಾಗಿದೆ. 
 
ಹೌದು, ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ್ದ ನಗರದ ಚೌಡೇಶ್ವರಿ ವಾರ್ಡ್‌ನ ಕಾಂಗ್ರೆಸ್ ಸದಸ್ಯೆ ಪದ್ಮಾವತಿ ಅವರ ಪತಿ ಅಮರನಾಥ್, ಬ್ಯಾಟರಾಯನಪುರ ಬಿಜೆಪಿ ಕಾರ್ಯಕರ್ತರೋರ್ವರ ಮೊಬೈಲ್‌ನಿಂದ ತಮಗೆ ಕರೆ ಬಂದಿದ್ದು, ನಿಮಗೆ 2.5 ಕೋಟಿ ನೀಡುತ್ತೇವೆ. ಅದನ್ನು ತೆಗೆದುಕೊಂಡು ಚುನಾವಣೆಗೆ ಮಾಡಿಕೊಂಡಿರುವ ಸಾಲ ತೀರಿಸಿಕೊಳ್ಳಿ. ಮುಂದೆ ನಮ್ಮದೇ ಪಕ್ಷದಲ್ಲಿ ತಮಗೆ ಟಿಕೆಟ್‌ನ್ನು ನೀಡಿ ಪ್ರಚಾರಕ್ಕೆ ಹಣವನ್ನೂ ಒದಗಿಸಲಿದ್ದೇವೆ ಎಂದು ಹೇಸರನ್ನು ಹೇಳದೆ ಪರೋಕ್ಷವಾಗಿ ಆರ್.ಅಶೋಕ್ ಅವರನ್ನು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಅಶೋಕ್ ನೋಟಿಸ್ ಜಾರಿಗೊಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ