ಕರ್ನಾಟಕದ ಜನ ಕತ್ತುಕೊಯ್ದುಕೊಂಡು ರಕ್ಷ ಕೊಡಬೇಕಷ್ಟೆ; ಸಚಿವ ರಮೇಶ್ ಕುಮಾರ್

ಮಂಗಳವಾರ, 30 ಆಗಸ್ಟ್ 2016 (15:54 IST)
ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲದಿರುವಾಗ ತಮಿಳುನಾಡಿಗೆ ಹೇಗೆ ನೀರು ಹರಿಸಲು ಸಾಧ್ಯ. ಕರ್ನಾಟಕದ ಜನ ಕತ್ತುಕೊಯ್ದುಕೊಂಡು ರಕ್ಷ ಕೊಡಬೇಕಷ್ಟೆ ಎಂದು ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಗುಡುಗಿದ್ದಾರೆ.
 
ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಬಚ್ಚಿಟ್ಟುಕೊಳ್ಳಲು ಸಾಧ್ಯವೆ? ತಮಿಳುನಾಡು ಸರಕಾರ ಇದನ್ನು ಅರ್ಥ ಮಾಡಿಕೊಳ್ಳಬೇಕು.  ಅದನ್ನು ಬಿಟ್ಟು ತಮಿಳುನಾಡು ಬಂದ್‌ಗೆ ಕರೆ ನೀಡಿದರೆ ಏನರ್ಥ ಎಂದು ಕಿಡಿಕಾರಿದ್ದಾರೆ.
 
ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ, ನಮಗೆ ಕುಡಿಯುವ ನೀರಿಗಾಗಿ ಪರದಾಡುವಂತಹ ಸ್ಥಿತಿ ಎದುರಾಗಿದೆ. ಕುಡಿಯಲು ನೀರಿಲ್ಲದಿರುವಾಗ ತಮಿಳುನಾಡಿಗೆ ಹೇಗೆ ನೀರು ಹರಿಸಲು ಸಾಧ್ಯ ಎಂದು ತಿರುಗೇಟು ನೀಡಿದರು. 
 
ನೀರಿಗಾಗಿ ತಮಿಳುನಾಡು ಬಂದ್ ಮಾಡಿದ್ರೆ ರಕ್ತ ಕೊಡಬೇಕಾಗುತ್ತದೆ ಅಷ್ಟೆ. ರಾಜ್ಯದ ನೀರಿನ ಪರಿಸ್ಥಿತಿಯನ್ನು ತಮಿಳುನಾಡಿನ ಜನರು ಅರ್ಥಮಾಡಿಕೊಳ್ಳಬೇಕು ಎಂದು ಆರೋಗ್ಯ ಖಾತೆ ಸಚಿವ ರಮೇಶ್ ಕುಮಾರ್ ಮನವಿ ಮಾಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ