ಅರೆನಗ್ನ ಚಿತ್ರಗಳನ್ನು ವೀಕ್ಷಿಸುವುದು ತಪ್ಪೆಂದು ಗೊತ್ತಿದ್ರೂ ಯಾಕೆ ನೋಡಿದ್ದೀರಿ?: ತನ್ವೀರ್‌ಗೆ ಪೂಜಾರಿ ಪ್ರಶ್ನೆ

ಶುಕ್ರವಾರ, 11 ನವೆಂಬರ್ 2016 (13:14 IST)
ಮಹಿಳೆಯನ್ನು ಪೂಜಿಸುವುದು ಭಾರತೀಯ ಸಂಸ್ಕ್ರತಿ. ಅರೆನಗ್ನ ಚಿತ್ರಗಳನ್ನು ವೀಕ್ಷಿಸುವುದು ತಪ್ಪೆಂದು ಗೊತ್ತಿದ್ದರೂ ಮತ್ತೆ ಮತ್ತೆ ಅದನ್ನೇ ನೋಡುವುದು ಸರಿಯೇ? ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಸಚಿವ ತನ್ವೀರ್ ಸೇಠ್ ವಿರುದ್ಧ ಗರಂ ಆಗಿದ್ದಾರೆ.
 
ಅರೆನಗ್ನ ಯುವತಿಯರ ಚಿತ್ರಗಳಿರುವಂತಹ ವಾಟ್ಸಪ್‌ ಗ್ರೂಪ್‌ಗಳಲ್ಲಿ ನೀವಿದ್ದೀರಿ ಎಂದಾಯಿತು.ಇದು ನಿಮ್ಮ ಘನತೆ ಗೌರವಕ್ಕೆ ಧಕ್ಕೆಯಲ್ಲವೇ? ನಿಮ್ಮ ವರ್ತನೆಯಿಂದ ಮೈಸೂರು ಜನತೆಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅಪಮಾನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸಚಿವ ಸ್ಥಾನಕ್ಕೆ ಕುತ್ತು ತಂದಿರುವ ನೀವು ಮೈಸೂರಿನ ಜನತೆಯ ಮಾನ ಮರ್ಯಾದೆ ಹಾಳು ಮಾಡಿದ್ದೀರಿ. ಅದ್ದರಿಂದ ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರಕಾರದಿಂದ ಹೊರಬನ್ನಿ ಎಂದು ಗುಡುಗಿದ್ದಾರೆ.
 
ಕಾಂಗ್ರೆಸ್ ಪಕ್ಷದ ಮತ್ತು ರಾಜ್ಯದ ಜನತೆಯ ಗೌರವವನ್ನು ಕಾಪಾಡಲು ಇಂದು ಸಂಜೆಯೊಳಗೆ ತನ್ವೀರ್ ಸೇಠ್ ಅವರನ್ನು ವಜಾ ಮಾಡಿ. ಇಲ್ಲಾಂದ್ರೆ ಸಚಿವನನ್ನು ವಜಾಗೊಳಿಸಲು ಮುಖ್ಯಮಂತ್ರಿಗಳಿಗೆ ಸೂಚನೆ ನೀಡುವಂತೆ ಹೈಕಮಾಂಡ್‌ಗೆ ಕೋರುತ್ತೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ