ತಾಂಜಾನಿಯಾ ಯುವತಿಯನ್ನು ಗುಂಪು ವಿವಸ್ತ್ರಗೊಳಿಸಿ ನಗ್ನ ಪೆರೇಡ್ ಮಾಡಿಲ್ಲ: ಪರಮೇಶ್ವರ್ ಸ್ಪಷ್ಟನೆ

ಗುರುವಾರ, 4 ಫೆಬ್ರವರಿ 2016 (16:12 IST)
ಮೇಲ್ನೋಟದ ವರದಿಗಳ ಪ್ರಕಾರ ಟಾಂಜಾನಿಯಾ ವಿದ್ಯಾರ್ಥಿನಿಯನ್ನು ವಿವಸ್ತ್ರಗೊಳಿಸಿ ನಗ್ನಳಾಗಿ ಪೆರೇಡ್ ಮಾಡಿಲ್ಲ ಎಂದು ಕರ್ನಾಟಕ ಗೃಹಸಚಿವ ಪರಮೇಶ್ವರ್ ಗುರುವಾರ ಸ್ಪಷ್ಟನೆ ನೀಡಿದ್ದಾರೆ. ಟಾಂಜಾನಿಯಾ ವಿದ್ಯಾರ್ಥಿನಿ ಮೇಲೆ ಜನಾಂಗೀಯ ದಾಳಿಯು ನಡೆದಿಲ್ಲ. ಇದು ಮುಂಚಿನ ಘಟನೆಗೆ ಪ್ರತಿಕ್ರಿಯೆಯಾಗಿ ಉದ್ರಿಕ್ತ ಜನರು ಅವಳನ್ನು ಥಳಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಪೊಲೀಸರು ಬಂಧಿಸಿದ್ದು, ರಾಜ್ಯಸರ್ಕಾರವು ವಿದೇಶಾಂಗ ಸಚಿವಾಲಯಕ್ಕೆ ಘಟನೆ ಬಗ್ಗೆ ವಿವರ ನೀಡಿದೆ. ಬೆಂಗಳೂರಿನಲ್ಲಿ 12,000 ವಿದೇಶಿ ವಿದ್ಯಾರ್ಥಿಗಳಿದ್ದು, ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಇಂತಹ ಘಟನೆಗಳು ಸಂಭವಿಸಬಾರದು ಎಂದು ಗೃಹಸಚಿವ ಜಿ. ಪರಮೇಶ್ವರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 
 
ಏತನ್ಮಧ್ಯೆ ಈ ಘಟನೆ ಕುರಿತು ವಿಸ್ತೃತ ವರದಿ ನೀಡುವಂತೆ ಕೇಂದ್ರ ಗೃಹಇಲಾಖೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಿದೆ. ಈ ಕುರಿತು ಬಿಜೆಪಿ ನಾಯಕ ಮುಕ್ತರ್ ಅಬ್ಬಾಸ್ ನಖ್ವಿ ಈ ಘಟನೆ ಕುರಿತು ಕಾಂಗ್ರೆಸ್ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದೆ. ಈ ನಡುವೆ ತಾಂಜಾನಿಯಾದ ಭಾರತೀಯ ರಾಯಭಾರಿ ಜಾನ್ ಕಿಜಾಯಿ  ಇದೊಂದು ಜನಾಂಗೀಯ ದಾಳಿ ಎಂದು ಬಣ್ಣಿಸಿದ್ದಾರೆ. ಜನಾಂಗೀಯ ದಾಳಿಯಲ್ಲದಿದ್ದರೆ ಯಾಕೆ ಮತ್ಯಾಕೆ ಬೆದರಿಕೆ ಹಾಕಿದವು. ಯುವತಿ ಕಪ್ಪಗಿದ್ದಳು ಎಂಬ ಕಾರಣಕ್ಕೆ ಹಲ್ಲೆ ಮಾಡಿರುವುದು ಸತ್ಯ ಎಂದು ಜಾನ್ ಕಿಜಾಯಿ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ