ಬುಸಿನೆಸ್‌ನಲ್ಲಿ ಭಾಗಿಯಾಗದಂತೆ ತಮ್ಮ ಮಕ್ಕಳಿಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ

ಭಾನುವಾರ, 15 ಮೇ 2016 (17:22 IST)
ಸ್ವಜನ ಪಕ್ಷಪಾತ ಆರೋಪ ಹಿನ್ನೆಲೆಯಲ್ಲಿ ನಾನು ಮುಖ್ಯಮಂತ್ರಿ ಆಗಿರೋ ತನಕ ಯಾವುದೇ ವ್ಯವಹಾರದಲ್ಲಿ ಭಾಗಿಯಾಗದಂತೆ ತಮ್ಮ ಮಕ್ಕಳಿಗೆ ಖಡಕ್ ಎಚ್ಚರಿಕೆ ನೀಡಿರುವುದಾಗಿ ಸ್ವತ ಸಿದ್ದರಾಮಯ್ಯನವರೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಭ್ರಷ್ಟಾಚಾರ ನಿಗ್ರಹ ದಳ ರಚನೆಯಾದ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರರಾಮಯ್ಯನವರ ಲಕ್ಷಾಂತರ ರೂಪಾಯಿ ಬೆಲೆಯ ಹ್ಯೂಬ್ಲೋಟ್ ವಾಚ್ ಪ್ರಕರಣ ದಾಖಲಾಗಿತ್ತು. ಏಪ್ರಿಲ್ 5 ರಂದು ಸಿಎಂ ಸಿದ್ದರಾಮಯ್ಯನವರ ಪುತ್ರನಾದ ಡಾ. ಯತೀಂದ್ರ ಅವರ ಆಪ್ತನ ಸಂಸ್ಥೆಗೆ 2.19 ಎಕರೆ ಜಮೀನನ್ನು ಬಿಡಿಎ ಬದಲಿ ಜಮೀನು ನೀಡಿದ ಆರೋಪ ಕೇಳಿ ಬಂದಿತ್ತು.
 
ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಒಡೆತನದ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ ಪ್ರೈವೆಟ್ ಲಿಮಿಟೆಡ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ಗುತ್ತಿಗೆ ಪಡೆಯುವಲ್ಲಿ ಅಕ್ರಮ ನಡೆಸಿದೆ ಎಂದು ಆರ್‌ಟಿಐ ಕಾರ್ಯಕರ್ತ ಎಸ್. ಭಾಸ್ಕರನ್ ಎಂಬುವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. 
 
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಇಮೇಜ್ ಮೆಕ್ ಒವರ್ ಮಾಡಿಕೊಳ್ಳಲು ಮುಂದಾಗಿದ್ದು, ತಮ್ಮ ಮಕ್ಕಳಿಗೆ ಯಾವುದೇ ಸಂಸ್ಥೆಯ ಸದಸ್ಯನಾಗಿರದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ