ಹಾವು ಬಿಡ್ತೇವೆ, ಬಿಡ್ತೇವೆ ಅಂತ ಹೇಳ್ತಿದ್ದಾರೆ ಯಾವ ಹಾವು ಬಿಡ್ತಾರೋ ನೋಡೋಣ: ಜಾರ್ಜ್

ಶನಿವಾರ, 31 ಜನವರಿ 2015 (16:12 IST)
ಅರ್ಕಾವತಿ ಡಿ ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ಹಾವು ಬಿಡುತ್ತೇವೆ, ಬಿಡುತ್ತೇವೆ ಎಂದು ಹೇಳುತ್ತಿದ್ದಾರೆ. ಅದೇನು ಕೆರೆ ಹಾವು ಬಿಡ್ತಾರೋ ಅಥವಾ ನಾಗರ ಹಾವೇ ಬಿಡುತ್ತಾರೋ ನಾವೂ ನೋಡ್ತೇವೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ವ್ಯಂಗ್ಯವಾಡಿದ್ದಾರೆ. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹಲವು ದಾಖಲೆಗಳು ನಮ್ಮ ಬಳಿ ಇದ್ದು, ಎಲ್ಲವನ್ನೂ ಸಂಗ್ರಹಿಸಿದ್ದೇವೆ. ಸಿಎಂ ಸಿದ್ದರಾಮಯ್ಯನವರು 119 ಎಕರೆಗೂ ಅಧಿಕ ಭೂಮಿಯನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ. ಆದರೆ ಈ ಭೂಮಿಯು ಸರ್ಕಾರಕ್ಕೆ ಸೇರಬೇಕಿದ್ದ ಆಸ್ತಿಯಾಗಿದೆ. ಎಂದು ಹೇಳುತ್ತಾ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಆದರೆ ಅವರು ಅಂದಿನಿಂದಲೂ ಹೇಳುತ್ತಿದ್ದಾರೆ ಹಾವು ಬಿಡುತ್ತೇವೆ, ಬಿಡುತ್ತೇವೆ ಎಂದು, ಅದೇನು ಕೆರೆ ಹಾವು ಬಿಡ್ತಾರೋ ಅಥವಾ ನಾಗರ ಹಾವೇ ಬಿಡುತ್ತಾರೋ ನಾವೂ ನೋಡ್ತೇವೆ ಎಂದು ಜಾರ್ಜ್ ವ್ಯಂಗ್ಯವಾಡಿದರು. 
 
ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಈ ಹಿಂದೆ ಸುದ್ದಿಗೋಷ್ಠಿ ನಡೆಸಿ ಅಕ್ರಮ ಅರ್ಕಾವತಿ ಡಿ ನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ ಎಲ್ಲಾ ದಾಖಲೆಗಳಿವೆ. ಅಧಿಕಾರಿಗಳು ಕೊಡಲು ಹಿಂದೇಟು ಹಾಕುತ್ತಿದ್ದರು. ಆದರೂ ಧಮ್ಕಿ ಹಾಕಿ ದಾಖಲೆಗಳನ್ನು ಪಡೆಯಬೇಕಾಯಿತು ಎಂದು ಅವರ ಬಳಿ ಇದ್ದ ಕೆಲವು ದಾಖಲೆಗಳನ್ನು ಮಾಧ್ಯಮಗಳ ಎದುರು ಪ್ರದರ್ಶಿಸಿದ್ದರು. 

ವೆಬ್ದುನಿಯಾವನ್ನು ಓದಿ