ಲಾಕರ್‌ಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ ಕಳ್ಳರು: ಗ್ರಾಹಕರ ಪರದಾಟ

ಬುಧವಾರ, 20 ಆಗಸ್ಟ್ 2014 (12:59 IST)
ಬ್ಯಾಂಕ್ ಲಾಕರ್‌ನಲ್ಲಿಟ್ಟರೂ ಚಿನ್ನ ಸುರಕ್ಷಿತವಲ್ಲ ಎನ್ನುವುದಕ್ಕೆ ಅರಕೆರೆಯಲ್ಲಿ ಕರ್ನಾಟಕ ಬ್ಯಾಂಕ್ ಲಾಕರ್‌ನಲ್ಲಿದ್ದ ಚಿನ್ನವನ್ನು ಕಳ್ಳರು ದರೋಡೆ ಮಾಡಿರುವುದಕ್ಕೆ ಸಾಕ್ಷಿವೊದಗಿಸಿದೆ.ಲಾಕರ್‌ನಲ್ಲಿಟ್ಟ 2 ಕೋಟಿ ರೂ.ಮೌಲ್ಯದ ಚಿನ್ನ ಕಳವಾಗಿದೆ.  ಸುಮಾರು 460ಕ್ಕೂ ಹೆಚ್ಚು ಗ್ರಾಹಕರು ಮನೆಯಲ್ಲಿ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಬ್ಯಾಂಕ್‌ನಲ್ಲಿ ಚಿನ್ನವನ್ನು ಸೇಫ್ ಲಾಕರ್‌ನಲ್ಲಿಟ್ಟರೆ ಬ್ಯಾಂಕ್ ಲಾಕರ್‌ಗೇ ಕಳ್ಳರು ಕನ್ನ ಹಾಕಿ ದೋಚಿದ್ದಾರೆ.

ಕರ್ನಾಟಕ ಬ್ಯಾಂಕ್ ಶಾಖೆ ಗ್ರಾಮದ ಹೊರವಲಯದಲ್ಲಿದ್ದು, ಬ್ಯಾಂಕ್ ಚಿನ್ನಾಭರಣ ಮತ್ತು ನಗದುಹಣ ಸುರಕ್ಷತೆಗಾಗಿ ಸೂಕ್ತ ಭದ್ರತೆ ಒದಗಿಸದೇ ಇದಿದ್ದರಿಂದ ಕಳ್ಳರಿಗೆ ತಮ್ಮ ಕೈಚಳಕ ತೋರಿಸಲು ಸುಲಭವಾಯಿತು.ಈಗ  ಕಳೆದುಕೊಂಡ ಚಿನ್ನವನ್ನು ಮರಳಿ ಪಡೆಯಲು ಗ್ರಾಹಕರು ಪರದಾಡುತ್ತಿದ್ದಾರೆ.

ಬ್ಯಾಂಕ್‌ಗೆ ಸೂಕ್ತ ಭದ್ರತೆ ಇಲ್ಲದೇ ಕೋಟ್ಯಂತರ ಮೌಲ್ಯದ ಚಿನ್ನವನ್ನು ಇಟ್ಟಿದ್ದು ದೊಡ್ಡ ಅಪರಾಧ ಎಂದು ಗ್ರಾಹಕರೊಬ್ಬರು ದೂರಿದ್ದಾರೆ.  

ವೆಬ್ದುನಿಯಾವನ್ನು ಓದಿ