ಇಸ್ಲಾಂ ಧರ್ಮ ಕಿತ್ತೊಗೆದಲ್ಲಿ ಮಾತ್ರ ವಿಶ್ವದಲ್ಲಿ ಶಾಂತಿ: ಬಿಜೆಪಿ ಸಂಸದ

ಬುಧವಾರ, 2 ಮಾರ್ಚ್ 2016 (14:56 IST)
ವಿಶ್ವದಲ್ಲಿ ಇಸ್ಲಾಂ ಧರ್ಮವಿರುವವರೆಗೂ ಭಯೋತ್ಪಾದನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ನೀಡಿರುವ ಹೇಳಿಕೆ ಬಿಜೆಪಿ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.  
 
ನಿನ್ನೆ ಕೇಂದ್ರ ಜಲ ಸಂಪನ್ಮೂಲ ಖಾತೆ ರಾಜ್ಯ ಸಚಿವ ರಾಮ್ ಶಂಕರ್ ಕಠಾರಿಯಾ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷದ ಭಾಷಣ ಮಾಡಿದ ಆರೋಪ ಎದುರಿಸುತ್ತಿರುವಂತೆಯೇ, ಇದೀಗ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.
 
ವಿಶ್ವದಲ್ಲಿ ಇಸ್ಲಾಂ ಧರ್ಮವಿರುವವರೆಗೂ ಭಯೋತ್ಪಾದನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಒಂದು ವೇಳೆ ಭಟ್ಕಳ್‌ನಂತಹ ನಗರವನ್ನು  ಶಾಂತಿಯುತವಾಗಿರಬೇಕು ಎಂದು ಬಯಸಿದಲ್ಲಿ, ವಿಶ್ವದಿಂದ ಇಸ್ಲಾಂ ಧರ್ಮವನ್ನು ಕಿತ್ತೊಗೆದು, ಇಸ್ಲಾಂ ಧರ್ಮವನ್ನು ಅಂತ್ಯಗೊಳಿಸಬೇಕು ಎಂದು ತಿಳಿಸಿದ್ದಾರೆ. 
 
ಆಗ್ರಾದಲ್ಲಿ ವಿಎಚ್‌ಪಿ ನಾಯಕನ ಹತ್ಯೆಯ ಸಂತಾಪ ಸೂಚಕ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ಕಠಾರಿಯಾ, ಮುಸ್ಲಿಮರ ವಿರುದ್ಧ ಹಿಂದು ಸಮುದಾಯ ಒಗ್ಗಟ್ಟಿನಿಂದಿರಬೇಕು ಎಂದು ನೀಡಿದ ಹೇಳಿಕೆ ಸಂಸತ್ತಿನ ಉಭಯ ಸದನಗಳಲ್ಲೂ ಕೋಲಾಹಲ ಸೃಷ್ಟಿಸಿತ್ತು.
 
ಆದರೆ ಕಠಾರಿಯಾ, ನಾನು ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಕೆಲ ಮುಸ್ಲಿಂ ಯುವಕರು ವಿಎಚ್‌ಪಿ ಕಾರ್ಯಕರ್ತ ಅರುಣ್ ಮಹೌರ್ ಎನ್ನುವವರನ್ನು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದರು. ಸಂತಾಪ ಸಭೆಯಲ್ಲಿ ಫತೇಹಪುರಿ ಸಿಕ್ರಿ ಬಿಜೆಪಿ ಸಂಸದ ಬಾಬುಲಾಲ್ ಕೂಡಾ ಉಪಸ್ಥಿತರಿದ್ದರು.
 
ಏತನ್ಮಧ್ಯೆ, ಲೋಕಸಭೆಯ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ, ಬಿಜೆಪಿ ಮತ್ತು ಆರೆಸ್ಸೆಸ್ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. 

ವೆಬ್ದುನಿಯಾವನ್ನು ಓದಿ