ಯಡಿಯೂರಪ್ಪ ಸಿಎಂ ಅಭ್ಯರ್ಥಿ ಆಗಲು ಆಕ್ಷೇಪಣೆಯಿಲ್ಲ: ಅತೃಪ್ತ ಮಾಜಿ ಶಾಸಕರು

ಮಂಗಳವಾರ, 28 ಜೂನ್ 2016 (15:13 IST)
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಿಎಂ ಅಭ್ಯರ್ಥಿ ಆಗಲು ಆಕ್ಷೇಪಣೆಯಿಲ್ಲ. ಆದರೆ, ಯಾವ ಕಾರಣಕ್ಕೆ ಹಿರಿಯ ಪದಾಧಿಕಾರಿಗಳನ್ನು ಕೈ ಬಿಟ್ಟು ಹೊಸಬರಿಗೆ ಆದ್ಯತೆ ನೀಡಲಾಗಿದೆ ಎನ್ನುವ ಬಗ್ಗೆ ಅವರು ಉತ್ತರಿಸಲೇಬೇಕು ಎಂದು ಮಾಜಿ ಸಚಿವರು, ಶಾಸಕರು ಒತ್ತಾಯಿಸಿದ್ದಾರೆ.
 
ಬೆಂಗಳೂರಿನ ಹೋಟೆಲ್‌ನಲ್ಲಿ ಸಭೆ ಸೇರಿರುವ ಅತೃಪ್ತ ಬಿಜೆಪಿ ಮುಖಂಡರು, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದಾದರೆ ಸಂತೋಷ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಸಂಘಟನೆಯಲ್ಲಿ ದುಡಿಯದವರಿಗೆ ಪದಾಧಿಕಾರಿಗಳಲ್ಲಿ ಸ್ಥಾನ ನೀಡಿರುವುದು ವಿಷಾದದ ಸಂಗತಿಯಾಗಿದೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ.
 
ಬಿಜೆಪಿಯ ರಾಜ್ಯದ ಹಿರಿಯ ನಾಯಕರು ಯಡಿಯೂರಪ್ಪ ಅವರ ಮನವೊಲಿಸಿ, ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ದುಡಿಯದ ವ್ಯಕ್ತಿಗಳಿಗೆ ಪದಾಧಿಕಾರಿಗಳ ಸ್ಥಾನ ನೀಡಬಾರದು ಎಂದು ಮನವಿ ಮಾಡಬೇಕಾಗಿ ಅತೃಪ್ತ ಬಿಜೆಪಿ ನಾಯಕರು ಕೋರಿದ್ದಾರೆ.
 
ಬೆಂಗಳೂರಿನ ನಾಯಕರು ಬಿ.ಎಸ್.ಯಡಿಯೂರಪ್ಪನವರಿಗೆ ಹೇಳಲು ಆಗುವುದಿಲ್ಲವಾ?  ಚುನಾವಣೆಯಲ್ಲಿ ನಾವು ಸೋತಿದ್ದೇವೆ ಎಂದರೆ ನಾಯಕರಲ್ಲ ಎಂದು ಅರ್ಥವೇ? ನಮ್ಮ ಜೊತೆ ನೀವು ಚುನಾವಣೆಯಲ್ಲಿ ಸೋಲನುಭವಿಸಿಲ್ಲವೇ ಎಂದು ಅತೃಪ್ತ ಮಾಜಿ ಶಾಸಕರು ಗುಡುಗಿದ್ದಾರೆ.    

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ