ಸಂಜೆಯೊಳಗೆ ಕೆಮೆಸ್ಟ್ರಿ ಪರೀಕ್ಷೆ ಮರುದಿನಾಂಕ ಪ್ರಕಟ: ಕಿಮ್ಮನೆ ರತ್ನಾಕರ್

ಗುರುವಾರ, 31 ಮಾರ್ಚ್ 2016 (11:27 IST)
ದ್ವಿತಿಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ, ಇಂದು ಸಂಜೆಯೊಳಗೆ ಕೆಮೆಸ್ಟ್ರಿ ಪರೀಕ್ಷೆ ಮರುದಿನಾಂಕ ಪ್ರಕಟಿಸಲಾಗುವುದು ಎಂದು ಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
 
ಒಟ್ಟು 1.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಪಿಯುಸಿ ಅಡಳಿತ ಮಂಡಳಿಯಿಂದ ತಪ್ಪಾಗಿರುವುದು ನಿಜ ಎಂದು ತಿಳಿಸಿದ್ದಾರೆ.
 
ಇಂದು ಸಂಜೆಯೊಳಗೆ ಮರು ಪರೀಕ್ಷಾ ದಿನಾಂಕವನ್ನು ಪ್ರಕಟಿಸುವಂತೆ ಈಗಾಗಲೇ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿರುವೆ ಎಂದು ಹೇಳಿದ್ದಾರೆ. 
 
ಪಿಯು ಮಂಡಳಿಯ ನಿರ್ದೇಶಕ ಪಲ್ಲವಿ ಅಕುರಾತಿ ಸೇರಿದಂತೆ ಪರೀಕ್ಷಾ ವಿಭಾಗದಲ್ಲಿರುವ ಪ್ರತಿಯೊಬ್ಬ ಉದ್ಯೋಗಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದ್ದಾರೆ.
 
ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣವಾದ ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಶಿಕ್ಷಣ ಖಾತೆ ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ