ಇಂದು ಮನತ್ತೋರ್ವ ಕಬ್ಬು ಬೆಳೆಗಾರನ ಆತ್ಮಹತ್ಯೆ

ಮಂಗಳವಾರ, 1 ಸೆಪ್ಟಂಬರ್ 2015 (13:52 IST)
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದಲೂ ಕೂಡ ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತಲಿದ್ದು, ಇಂದು ಮತ್ತೋರ್ವ ಅನ್ನದಾತ ನೇಣಿಗೆ ಶರಣಾಗಿದ್ದಾನೆ. 
 
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಹೂನಪ್ಪ ನರಿ(45) ಎಂದು ಹೇಳಲಾಗಿದ್ದು, ಜಿಲ್ಲೆಯ ಸವದತ್ತಿ ತಾಲೂಕಿನ ಮಬ್ಬನೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. 
 
ಈತನಿಗೆ 2 ಎಕರೆ ಜಮೀನಿದ್ದು, ಕಬ್ಬನ್ನು ಬೆಳೆದಿದ್ದ. ಕಬ್ಬಿನ ಬೆಳೆಗಾಗಿ ಬ್ಯಾಂಕ್‌ನಲ್ಲಿ 25 ಸಾವಿರ ಸೇರಿದಂತೆ ಒಟ್ಟು 2.5 ಲಕ್ಷ ಕೈ ಸಾಲ ಮಾಡಿಕೊಂಡಿದ್ದ. ಇತ್ತೀಚೆಗೆ ರೇಣುಕಾ ಸಕ್ಕರೆ ಕಾರ್ಖಾನೆಗೆ ಕಬ್ಬನ್ನೂ ಕೂಡ ಪೂರೈಸಿದ್ದ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯು ರೈತ ನರಿ ಅವರಿಗೆ 1 ಲಕ್ಷಕ್ಕೂ ಅಧಿಕ ಹಣವನ್ನು ಪಾವತಿಸಬೇಕಿತ್ತು. ಆದರೆ ಕಾರ್ಖಾನೆ ಹಣ ಹಿಂದಿರುಗಿಸಿಲ್ಲ ಎಂದು ಮನನೊಂದ ರೈತ ಇಂದು ನೇಣಿ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 
 
ಈ ಸಂಬಂಧ ಸವದತ್ತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ