ನ್ಯಾಯಮೂರ್ತಿಯಾದ ನನಗೆ ನ್ಯಾಯ ಸಿಗಲಿಲ್ಲ: ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿಷಾದ

ಸೋಮವಾರ, 20 ಏಪ್ರಿಲ್ 2015 (16:01 IST)
ನ್ಯಾಯಮೂರ್ತಿಯಾದ ನನಗೆ ನ್ಯಾಯ ಸಿಗಲಿಲ್ಲ ಎಂದು ಇಂದು ನಿವೃತ್ತಿಯಾಗಲಿರುವ ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ವಿಷಾದ ವ್ಯಕ್ತಪಡಿಸಿದ್ದಾರೆ.

ಇಂದು ಕೋರ್ಟ್‌ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನನ್ನ ವೃತ್ತಿ ಜೀವನದಲ್ಲಿ ಒಂದು ತೀರ್ಪು ಮಾತ್ರ ಕಾಯ್ದಿರಿಸಿದ್ದೆ. ಉಳಿದ ಎಲ್ಲಾ ತೀರ್ಪುಗಳನ್ನು ನ್ಯಾಯಾಲಯದಲ್ಲಿ ಬರೆಸಿದ್ದೇನೆ.ಒಂದಂಕಿ ಲಾಟರಿ ತಡೆಗೆ ಮಹತ್ತರ ತೀರ್ಪು ನೀಡಿದ್ದೇನೆ ಎಂದರು.

ನಾನು ಬರೆದ ಪತ್ರವನ್ನು ಪಿಐಎಲ್ ಆಗಿ ಬಳಸಲಾಯಿತು. ಇಂದರಿಂದ ಎಂಟೋಸಲ್ಫಾನ್ ಪೀಡಿತರಿಗೆ ಅನುಕೂಲವಾಯಿತು. ಸಹದ್ಯೋಗಿ ಜಡ್ಜ್ ಚಿತಾವಣೆಯಿಂದ ಪತ್ರಿಕೆಗಳಲ್ಲಿ ನನ್ನ ವಿರುದ್ಧ ತೇಜೋವಧೆ ಮಾಡಲಾಯಿತು. ಆಕ್ರಮ ಆಸ್ತಿ ಸಂಪಾದನೆಯ ಸುಳ್ಳು ಆರೋಪ ಹೊರಿಸಲಾಯಿತು ಎಂದು ತಿಳಿಸಿದರು.

ನಾನು ಸಿಜೆ ಆಗದಂತೆ ನ್ಯಾಯಾಂಗದೊಳಗೆ ಪ್ರಯತ್ನ ನಡೆಸಲಾಯಿತು. ಸುಪ್ರೀಂಕೋರ್ಟ್‌ನಲ್ಲಿ ನನ್ನ ಬಡ್ತಿ ಫೈಲ್ ಪೆಂಡಿಂಗ್ನಲ್ಲಿ ಇಡಲಾಯಿತು. ನ್ಯಾಯಾಂಗದಲ್ಲೇ ಇರುವ ಕೆಲ ವಿದ್ರೋಹಿಗಳಿಂದ ಮುಖ್ಯನ್ಯಾಯಮೂರ್ತಿಯಾಗುವ ಅವಕಾಶ ಕಳೆದುಕೊಂಡೆ ಎಂದು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ್ ಬೇಸರ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ