ಇಂದು ಕೂಡ ಪೋಲಿಸರಿಂದ ಮೈತ್ರಿಯಾ ವಿಚಾರಣೆ

ಶುಕ್ರವಾರ, 29 ಆಗಸ್ಟ್ 2014 (13:26 IST)
ನಟಿ ಮೈತ್ರಿಯಾ ಮತ್ತು ರೈಲ್ವೆ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್‌ ಗೌಡರ  ಮದುವೆ ವಿಚಾರಣೆ ಕುರಿತಂತೆ ಇಂದು ಕೂಡ ಪೋಲಿಸರು ಮೈತ್ರಿಯಾ ಮನೆಯಲ್ಲಿ ಖಾಸಗಿ ವಿಚಾರಣೆ ನಡೆಸಲಿದ್ದಾರೆ. 
 
ಎಸಿಪಿ ಓಂಕಾಯ್ಯರ ತಂಡ ಇಂದು ಮೂರಗಂಟೆಗಳ ಕಾಲ ವಿಚಾರಣೆ ನಡೆಸಲಿದ್ದಾರೆ. ನಿನ್ನೆಯೂ ಕೂಡ ಓಂಕಾಯ್ಯ ನೇತೃತ್ವದ ತಂಡ ವಿಚಾರಣೆ ನಡೆಸಿತ್ತು. ಆದರೆ ತಡರಾತ್ರಿಯಾದ ಕಾರಣ ವಿಚಾರಣೆ ನಾಳೆ ಮಾಡಿ ಎಂದು ಮೈತ್ರಿಯಯಾ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಇಂದು ಅವರ ವಿಚಾರಣೆ ನಡೆಯಲಿದೆ  ಎಂದು ಮೂಲಗಳೂ ತಿಳಿಸಿವೆ. 
 
ಪೋಲಿಸರು ವಿಚಾರಣೆ ಸಂದರ್ಬದಲ್ಲಿ ಎಲ್ಲಾ ರೀತಿಯ ವಿಷಯಗಳನ್ನು ಕಲೆಹಾಕುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಾದ ಪೋಟೊಗಳು ಮತ್ತು ಅಡಿಯೋ ರಿಕಾರ್ಡ್‌‌ ನೀಡುವುದಾಗಿ ಮೈತ್ರಿಯಾ ಹೇಳಿದ್ದರಿಂದ ಪೋಲಿಸರು ಮತ್ತೆ ಇಂದು ಕೂಡ ವಿಚಾರಣೆ ನಡೆಸಲಿದ್ದಾರೆ. 
 
ಇಂದು ಗಣೇಶ ಚತುರ್ಥಿ ಹಬ್ಬವಿದ್ದಕಾರಣ ಕೇವಲ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಲಿದ್ದಾರೆ. ಹಬ್ಬದ ಪ್ರಯುಕ್ತ ಮೈತ್ರಿಯಾ ತಮ್ಮ ತಾಯಿ ಇಂದಿರಾರೊಂದಿಗೆ ಗವಿಗಂಧಾರೇಶ್ವರ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆಯಲು ಹೋದಾಗಿ ಈ ವಿಷಯವನ್ನು ಮಾಧ್ಯಮದವರಿಗೆ ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ