ಪಂಚಾಚಾರ್ಯರ ವಿರುದ್ಧ ನಾಳೆ ಬೃಹತ್ ಸಮಾವೇಶ: ಮಹಾಮಾತೆ ಮಹಾದೇವಿ

ಗುರುವಾರ, 29 ಜನವರಿ 2015 (14:27 IST)
ಸನ್ಯಾಸ ದೀಕ್ಷೆಯನ್ನು ಕಳಂಕಿತವಾಗಿ ಸಂಪಾದಿಸಿಕೊಂಡಿರುವ ಪಂಚಾಚಾರ್ಯರು ಬಸವಣ್ಣನವರ ವಚನಗಳು ಹಾಗೂ ಸುದ್ದಿಗೆ ಬರಬಾರದು ಎಂದು ಮಹಾಮಾತೆ ಮಹಾಲಕ್ಷ್ಮಿ ಪಂಚಾಚಾರ್ಯ ಸ್ವಾಮೀಜಿಗಳಿಗೆ ತಿರುಗೇಟು ನೀಡಿದ್ದಾರೆ.
 
ಅಡ್ಡಪಲ್ಲಕ್ಕಿ ಎಂಬ ಹೆಸರಿನಲ್ಲಿ ಬದುಕಿರುವಾಗಲೇ ಜನರ ಮೇಲೆ ಸವಾರಿ ಮಾಡುವ ಪಂಚಪೀಠದ ರಂಭಾಪುರಿ ಶ್ರೀಗಳು, ಪಂಚಾಚಾರ್ಯ ಶ್ರೀಗಳು ಸಮುದಾಯವನ್ನು ಹೊಡೆಯುವ ತಂತ್ರವನ್ನು ಮಾಡುತ್ತಿದ್ದಾರೆ. ಅವರ ಈ ಕುತಂತ್ರಗಳಿಂದ ಸರ್ಕಾರದ ಹಲವು ಸೌಲಭ್ಯಗಳು ಲಿಂಗಾಯತ ಸಮುದಾಯಕ್ಕೆ ಸಿಗದೆ ಕೈ ತಪ್ಪಿ ಹೋಗುತ್ತಿವೆ. ಇನ್ನು ಮುಂದೆ ಬಸವಣ್ಣನವರ ವಚನಗಳು ಹಾಗೂ ಸುದ್ದಿಗೆ ಅವರು ಬರಬಾರದು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಸಮರ ಸಾರುವ ಸಲುವಾಗಿ ನಾಳೆ ಧಾರವಾಡದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದರು. 
 
ಪಂಚಪೀಠದ ಶ್ರೀಗಳು, ಬಸವಣ್ಣನವರ ಎಲ್ಲಾ ವಚನಗಳು ಕೇವಲ ಒಂದು ಗುಂಪಿಗೆ ಸಂಬಂಧಿಸಿದ್ದೇ ಹೊರತು, ಅವೆಲ್ಲವೂ ಇಡೀ ಲಿಂಗಾಯತ ಸಮುದಾಯಕ್ಕೆ ಸೇರಿಲ್ಲ ಎನ್ನವ ಮೂಲಕ ವಿವಾದ ಸೃಷ್ಟಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಾಮಾತೆ ಮಹಾದೇವಿ ಈ ಹೇಳಿ ನೀಡಿದ್ದಾರೆ. 

ವೆಬ್ದುನಿಯಾವನ್ನು ಓದಿ