ಸಿದ್ದರಾಮಯ್ಯ ಮಂಡಿಸಿದ ಜನಪ್ರಿಯ ಬಜೆಟ್`ನ ಟಾಪ್ 10 ಹೈಲೇಟ್ಸ್

ಬುಧವಾರ, 15 ಮಾರ್ಚ್ 2017 (16:23 IST)
ನಿರೀಕ್ಷೆಯಂತೆ ಸಿಎಂ ಸಿದ್ದರಾಮಯ್ಯ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಕೆಲ ಯೋಜನೆಗಳನ್ನ ಘೋಷಿಸಿದ್ದಾರೆ. ತಮಿಳುನಾಡಿನ ಅಮ್ಮ ಕ್ಯಾಂಟೀನ್ ರೀತಿ ನಮ್ಮ ಕ್ಯಾಂಟೀನ್, ಇವೇ ಮುಂತಾದ ಟಾಪ್ 10 ಹೈಲೈಟ್ಸ್ ಇಲ್ಲಿದೆ.

 
   
-  ಅಮ್ಮ ಕ್ಯಾಂಟೀನ್ ರೀತಿ ಬೆಂಗಳೂರಿನ 198 ವಾರ್ಡ್`ಗಳಲ್ಲಿ ನಮ್ಮ ಕ್ಯಾಂಟೀನ್, 5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ

-  21 ಜಿಲ್ಲೆಗಳಲ್ಲಿ 49 ಹೊಸ ತಾಲೂಕುಗಳ ಘೋಷಣೆ

-  ಮಲ್ಟಿಪ್ಲೆಕ್ಸ್`ನಲ್ಲಿ ಟಿಕೆಟ್ ದರ 200 ರೂ.ಗಿಂತ ಹೆಚ್ಚು ನಿಗದಿಪಡಿಸುವಂತಿಲ್ಲ, ಕನ್ನಡ ಚಿತ್ರಗಳಿಗೆ 2 ಸ್ಕ್ರೀನ್ ನಿಗದಿ ಕಡ್ಡಾಯ

- ಅನ್ನಭಾಗ್ಯ ಯೋಜನೆಯಡಿ ಪ್ರತೀ ವ್ಯಕ್ತಿಗೆ ನೀಡುತ್ತಿರುವ ಅಕ್ಕಿ 7 ಕೆ.ಜಿಗೆ ಹೆಚ್ಚಳ

- ಸರ್ಕಾರಿ ಶಾಲೆಯಲ್ಲಿ 1ನೇ ತರಗತಿಯಿಂದ ಇಂಗ್ಲೀಷ್ ಪಠ್ಯ ಬೋಧನೆ

- ಸರ್ಕಾರಿ, ಅನುದಾನಿತ ವೈದ್ಯಕೀಯ, ಇಂಜಿನಿಯರಿಂರಿಗ್, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಕಾಲೇಜುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್

- ರೈತರ ಸಾಲಮನ್ನಾ ಇಲ್ಲ, 3 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ

- 6 ಹೊಸ ಮೆಡಿಕಲ್ ಕಾಲೇಜು ಮತ್ತು 5 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು

- ಬರ ಹಿನ್ನೆಲೆಯಲ್ಲಿ ಮೋಡ ಬಿತ್ತನೆಗೆ 30 ಕೋಟಿ ರೂಪಾಯಿ
- 16,500 ಮಹಿಳಾ ಆರೋಗ್ಯ ಸಹಾಯಕಿಯರಿಗೆ ಟ್ಯಾಬ್ ವಿತರಣೆ, ಡಿಜಿಟಲ್ ನಿಗಾ ವ್ಯವಸ್ಥೆ

 

ವೆಬ್ದುನಿಯಾವನ್ನು ಓದಿ