ಆರ್ಕಿಡ್ಸ್ ಶಾಲೆಯಲ್ಲಿ ಘಟನೆ ಮರುಸೃಷ್ಟಿ ಮೂಲಕ ಅಪರಾಧಿ ಪತ್ತೆಗೆ ಪ್ರಯತ್ನ

ಶುಕ್ರವಾರ, 24 ಅಕ್ಟೋಬರ್ 2014 (15:48 IST)
ಆರ್ಕಿಡ್ಸ್ ಶಾಲೆಯಲ್ಲಿ ಮಗುವಿನ ಮೇಲೆ ನಡೆದ ಅತ್ಯಾಚಾರ ನಡೆದ ಘಟನೆ ಮರುಸೃಷ್ಟಿ ಮೂಲಕ ಸತ್ಯಾಂಶವನ್ನು ಬಯಲು ಮಾಡಲು ಪೊಲೀಸರು ಪ್ರಯತ್ನಿಸಿದ್ದಾರೆ. ಶಾಲೆಯಲ್ಲಿ ಆ ದಿನ ಯಾವ ಬೆಳವಣಿಗೆ ನಡೆದಿದೆ ಎಂಬುದನ್ನು ಮರುಸೃಷ್ಟಿ ಮಾಡಿ ಅದನ್ನು ಆಧರಿಸಿ ತನಿಖೆ ನಡೆಸಲು ಪೊಲೀಸರು ಯೋಜಿಸಿದ್ದಾರೆ.

ಬಸ್ಸುಗಳನ್ನು ಅಂದು ನಿಂತ ಜಾಗದಲ್ಲಿ ನಿಲ್ಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಮೂಲಕ ಅಪರಾಧಿಯ ಪತ್ತೆಗೆ ಯಾವುದಾದರೂ ಸುಳಿವು ಸಿಗುತ್ತದೆಯೇ ಎಂದು ಪೊಲೀಸರು ತನಿಖೆ ನಡೆಸಿದ್ದಾರೆ.

ಮೂರು ವರ್ಷ ಮಗುವಿನಿಂದ ಹೇಳಿಕೆ ಪಡೆಯುವುದು ಕೂಡ ಪೊಲೀಸರಿಗೆ ಕಷ್ಟವಾಗಿದ್ದು, ಇದು ಸೂಕ್ಷ್ಮವಾದ ಪ್ರಕರಣವಾದ್ದರಿಂದ ನಾವು ಆರೋಪಿಯನ್ನು ಬಂಧಿಸುವ ಬ
ಗ್ಗೆ ಯಾವುದೇ ಗಡುವನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ಎಲ್‌ಕೆಜಿ ಓದುತ್ತಿರುವ ಮಗಳನ್ನು ಮನೆಗೆ ಕರೆದು ತರಲು ತಾಯಿ ಶಾಲೆಗೆ ಹೋದ ಸಂದರ್ಭದಲ್ಲಿ ಮಗು ಹೊಟ್ಟೆ ನೋವೆಂದು ಅಳುತ್ತಿರುವುದು ಗಮನಕ್ಕೆ ಬಂದಿದೆ. ಮನೆಗೆ ಹೋದ ನಂತರ ಆಕೆಗೆ ಜ್ವರ ಕೂಡ ಬಂದಿದೆ. ಅಲ್ಲೇ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮಗುವಿನ ಗುಪ್ತಾಂಗದ ಮೇಲೆ ಗಾಯವಿರುವ ಗುರುತು ಪತ್ತೆಯಾಗಿದ್ದು ವೈದ್ಯರು ಲೈಂಗಿಕ ದೌರ್ಜನ್ಯವಾಗಿರುವ ಬಗ್ಗೆ ಶಂಕಿಸಿದ್ದಾರೆ.
 
ಬೆದರಿದ ತಾಯಿ ಮಗುವಿನ ತಾಯಿ ಆಕೆಯನ್ನು ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕೊಂಡೊಯ್ದಿದ್ದಾಳೆ. ಅಲ್ಲಿ ಆಕೆಯ ಮೇಲೆ ಲೈಂಗಿಕ ಶೋಷಣೆ ನಡೆದಿರುವುದು ಖಚಿತವಾಗಿದೆ. ಆಘಾತಕ್ಕೀಡಾದ ಪೋಷಕರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ