ಟಿಟಿಯಲ್ಲಿ ಆಗಿದ್ದು ಗ್ಯಾಂಗ್‌ ರೇಪ್ ಅಲ್ಲವಂತೆ!

ಗುರುವಾರ, 8 ಅಕ್ಟೋಬರ್ 2015 (11:50 IST)
ಸಿಲಿಕಾನ್ ಸಿಟಿಯನ್ನು ಬೆಚ್ಚಿ ಬೀಳಿಸಿದ ಅತ್ಯಾಚಾರ ಘಟನೆ ಸಾಮೂಹಿಕ ಅತ್ಯಾಚಾರವೇ ಅಲ್ಲವಂತೆ. ಹೀಗೆಂದು ಹೇಳಿದವರು ಬೇರೆ ಯಾರೂ ಅಲ್ಲ, ನಮ್ಮ ಗೃಹ ಸಚಿವರಾದ ಕೆ.ಜೆ. ಜಾರ್ಜ್ ಅವರ ವಾದವಿದು.
 
ಕಳೆದ ಶನಿವಾರ ಮಡಿವಾಳದಲ್ಲಿ ಟೆಂಪೋ ಟ್ರಾವೆಲರ್‍‌ನಲ್ಲಿ ನಡೆದದ್ದು ಗ್ಯಾಂಗ್‍ರೇಪ್ ಅಲ್ಲ. ಇಬ್ಬರು ಅತ್ಯಾಚಾರವೆಸಗಿದರೆ ಅದು ಗ್ಯಾಂಗ್‍ರೇಪ್ ಹೇಗೆ ಆಗುತ್ತದೆ? ಎಂದು ಸಚಿವರು ಮಾಧ್ಯಮಗಳಿಗೆ ಪ್ರಶ್ನೆ ಹಾಕಿದ್ದಾರೆ.
 
ಮಧ್ಯಪ್ರದೇಶ ಮೂಲದ ಕಾಲ್ ಸೆಂಟರ್ ಉದ್ಯೋಗಿ ಯುವತಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿದಂತೆ ಮಾಧ್ಯಮಗಳು ಜಾರ್ಜ್ ಅವರ ಬಳಿ ಪ್ರಶ್ನಿಸಲಾಗಿ ಉತ್ತರಿಸಿದ ಅವರು, 'ನೀವಿದನ್ನು ಸಾಮೂಹಿಕ ಅತ್ಯಾಚಾರ ಎಂದು ಹೇಗೆ ಹೇಳುತ್ತೀರಾ? ಅವರೇನು ನಾಲ್ಕೈದು ಜನ ಇದ್ದರಾ? ಕೃತ್ಯ ನಡೆಸಿದವರು ಇಬ್ಬರೇ.ಅದು ಹೇಗೆ ಸಾಮೂಹಿಕ ಅತ್ಯಾಚಾರವಾಗುತ್ತದೆ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
 
ರಾಜ್ಯದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಚಿವ ಜಾರ್ಜ್ ಈ ರೀತಿಯ ಹೊಣೆಗೇಡಿತನದ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಹೊಸದೇನಲ್ಲ. 'ಅತ್ಯಾಚಾರ ಪ್ರಕರಣಗಳನ್ನು ಮಾಧ್ಯಮಗಳು ವೈಭವಿಕರಿಸುತ್ತವೆ', ಎಂದು ಅವರು ಈ ಮೊದಲು ಹೇಳಿಕೆ ನೀಡಿದ್ದರು.

ವೆಬ್ದುನಿಯಾವನ್ನು ಓದಿ