ಅವಳಿ ರೈಲು ದುರಂತ: ಲೋಕಸಭೆಯಲ್ಲಿ ಸಚಿವರ ಪ್ರತಿಕ್ರಿಯೆ

ಬುಧವಾರ, 5 ಆಗಸ್ಟ್ 2015 (14:11 IST)
ಮಧ್ಯ ಪ್ರದೇಶದಲ್ಲಿ ನಡೆದಿದ್ದ ಅವಳಿ ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಲೋಕಸಭೆಯಲ್ಲಿ ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಸಾವನ್ನಪ್ಪಿರುವವರ ಕುಟುಂಬಕ್ಕೆ ಪರಿಹಾರ ಘೋಷಿಸಿದ್ದೇವೆ. ಅಲ್ಲದೆ ಗಾಗೊಂಡಿರುವವರಿಗೆ ಸೂಕತ್ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
 
ಪ್ರತಿಪಕ್ಷಗಳು ಪ್ರಶ್ನಿಸಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಅವಘಡವು ಮಳೆ ಅತಿಯಾಗಿ ಬಿದ್ದ ಪರಿಣಾಮ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಶೀಘ್ರವೇ ನಾನೂ ಕೂಡ ಸ್ಥಳಕ್ಕೆ ತೆರಳಿ ಪರಿಶೀಲಿಸಲಿದ್ದೇನೆ ಎಂದ ಅವರು, ಸಾವನ್ನಪ್ಪಿದವರಿಗೆ ಸರ್ಕಾರ ಈಗಾಗಲೇ ಪರಿಹಾರವನ್ನೂ ಘೋಷಿಸಿದೆ ಎಂದರು. 
 
ಕಾಮಾಯನಿ ಎಕ್ಸ್‌ಪ್ರೆಸ್ ಹಾಗೂ ಜನತಾ ಎಕ್ಸ್‌ಪ್ರೆಸ್ ಎಂಬ ಹೆಸರಿನ ಎರಡು ರೈಲುಗಳು ನಿನ್ನೆ ರಾತ್ರಿ ಸರಿ ಸುಮಾರು 2 ಗಂಟೆ ವೇಳೆಯಲ್ಲಿ ಮಧ್ಯ ಪ್ರದೇಶದ ಹಾರ್ದಾ ಎಂಬ ನಗರದ ಬಳಿ ಇರುವ ಸೇತುವೆಯೊಂದರ ಮೇಲೆ ಹಾದು ಹೋಗುವ ಸಂದರ್ಭದಲ್ಲಿ ಬೋಗಿಗಳು ಕಳಚಿಕೊಂಡ ಪರಿಣಾಮ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ 31 ಮಂದಿ ಸಾವನ್ನಪ್ಪಿ, 24ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. 
 
ಇನ್ನು ಕಾಮಾಯನಿ ಎಕ್ಸ್‌ಪ್ರೆಸ್ ಮುಂಬೈಯಿಂದ ವಾರಣಾಸಿಗೆ ತಲುಪಿತಿದ್ದರೆ, ಜನತಾ ಎಕ್ಸ್‌ಪ್ರೆಸ್ ರೈಲು ಪಾಟ್ನಾದಿಂದ ಮುಂಬೈ ಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ