ಇಬ್ಬರು ಭಾರತೀಯರಿಗೆ ರೋಮನ್ ಮ್ಯಾಗ್ಸೆಸೆ ಕಿರೀಟ

ಬುಧವಾರ, 29 ಜುಲೈ 2015 (12:17 IST)
ಈ ಬಾರಿಯ ರೋಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾರತದ ಇಬ್ಬರು ನಾಗರೀಕರು ಭಾಜನರಾಗಿದ್ದಾರೆ. ಪ್ರಶಸ್ತಿಗೆ ಭಾಜನರಾದ ಇಬ್ಬರು ಸಾಧಕರು ಸಂಜೀವ್ ಚತುರ್ವೇಧಿ ಹಾಗೂ ಅಂಶು ಗುಪ್ತಾ. 
 
ಸಂಜೀವ್ ಚತುರ್ವೇದಿ ಅವರಿಗೆ ಉದಯೋನ್ಮುಖ ನಾಯಕತ್ವದ ವಿಭಾಗದಲ್ಲಿ ನೀಡಲಾಗಿದ್ದು, ಇವರು ಪ್ರಸ್ತುತ ಭಾರತ ವೈದ್ಯಕೀಯ ಸಂಸ್ಥೆಯ ಉಪ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇವರು ಗುಪ್ತಚರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ವೇಳೆಯಲ್ಲಿ ಭಾರತ ವೈದ್ಯಕೀಯ ಸಂಸ್ಥೆಯ ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದರು.
 
ಪ್ರಶಸ್ತಿಗೆ ಭಾಜನರಾಗಿರುವ ಮತ್ತೋರ್ವ ಭಾರತೀಯ ಅಂಶು ಗುಪ್ತಾ. ಇವರು ಗೂಂಜಿ ಎಂಬ ಸರ್ಕಾರರೇತರ ಸೇವಾ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ. ಇವರಿಗೆ ಅವರ್ಗೀಕೃತ ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ