ಮಂಗಳೂರು ವಿಶ್ವವಿದ್ಯಾಲಯ: ಇಬ್ಬರು ಉದ್ಯೋಗಿಗಳ ಅನುಮಾನಾಸ್ಪದ ಸಾವು

ಮಂಗಳವಾರ, 20 ಮೇ 2014 (10:05 IST)
ಮಂಗಳೂರು ವಿಶ್ವವಿದ್ಯಾನಿಲಯದ ಇಬ್ಬರು ಉದ್ಯೋಗಿಗಳು ಭಾನುವಾರ ವಿಶ್ವವಿದ್ಯಾಲಯದ ಆವರಣದಲ್ಲಿನ ತಮ್ಮ ಕ್ವಾರ್ಟರ್ಸ್‌ನಲ್ಲಿ ಸತ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
 
ಕೊನಾಜೆ ಪೋಲಿಸ್ ಡಿ ಸಿ ವಸಂತ್ ಪ್ರಕಾರ ಅವರು ತಮ್ಮ ಕ್ವಾರ್ಟರ್ಸ್ ಕಡೆ ನಡೆದುಕೊಂಡು ಹೋಗುತ್ತಿದ್ದಾಗ, ಪಕ್ಕದ ಕ್ವಾರ್ಟರ್ಸ್ ಕಡೆಯಿಂದ ಕೆಟ್ಟ ವಾಸನೆ ಬಂದಿತು. ಅವರದನ್ನು ವಿಶ್ವವಿದ್ಯಾನಿಲಯದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು. ಬಾಗಿಲನ್ನು ಒಡೆದು ಕೋಣೆಯನ್ನು ಪ್ರವೇಶಿಸಿದಾಗ ತಿಲಕ(40)  ಸತ್ತು ಬಿದ್ದಿರುವುದು ಕಂಡು ಬಂತು ಮತ್ತು ಇನ್ನೊಂದು ಕೋಣೆಯಲ್ಲಿ ಮೃತ ತಿಲಕ ಸಹೋದ್ಯೋಗಿ 60 ವಯಸ್ಸಿನ ರಾಮಪ್ಪ ಕೂಡ ಫ್ಯಾನ್‌ಗೆ ನೇಣು ಹಾಕಿಕೊಂಡಿರುವುದು ಕಂಡು ಬಂತು.
 
ತಿಲಕ ವಿಷ ಕುಡಿದಿರಬಹುದು ಎಂದು ಶಂಕಿಸಲಾಗಿದೆ. ಅವರಿಬ್ಬರು ಮೇ 15 ರಿಂದ ಮೇ 18 ರ ನಡುವೆ  ಸತ್ತಿರಬಹುದು ಎಂದು ಭಾವಿಸಲಾಗಿದ್ದು, ಅವರ ದೇಹ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. 
 
ಪೋಲಿಸರ ಪ್ರಕಾರ ತಿಲಕ ಮತ್ತು ರಾಮಪ್ಪ ಗ್ರುಪ್ ಡಿ ಉದ್ಯೋಗಿಗಳಾಗಿದ್ದು, ಅವಿವಾಹಿತಳಾಗಿರುವ ತಿಲಕ ತನ್ನ ಕ್ವಾರ್ಟರ್ಸ್‌ಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದರು.  

ವೆಬ್ದುನಿಯಾವನ್ನು ಓದಿ