ಅಬ್ಬಬ್ಬಾ ತರಕಾರಿ, ತುಂಬಾ ದುಬಾರಿ, ಗ್ರಾಹಕರು ಗಾಬರಿ

ಮಂಗಳವಾರ, 8 ಜುಲೈ 2014 (18:03 IST)
ತರಕಾರಿ ರೇಟ್ ಕೇಳಿ ಗ್ರಾಹಕರು ಗಾಬರಿಯಾಗದಿದ್ದಾರೆ. ದಿನದಿಂದ ದಿನಕ್ಕೆ ತರಕಾರಿ ದರ ಗಗನಕ್ಕೇರುತ್ತಿರುವುದರಿಂದ ಗ್ರಾಹಕ ಗಾಬರಿಯಾಗಲು ಕಾರಣವಾಗಿದೆ.  

ಬೀಟ್ರೂಟ್  ಕೆಜಿಗೆ 46 ರೂ.  ನುಗ್ಗೇಕಾಯಿ ಕೆಜಿಗೆ 80 ರೂ. ಕೊತ್ತಂಬರಿ ಕೆಜಿಗೆ 200 ರೂ. ಟೊಮೇಟೊ ಕೆಜಿ 36 ಹೀಗೆ ತರಕಾರಿ ದರ ಕೇಳಿ ಗ್ರಾಹಕರು ಬೆಚ್ಚಿ ಬಿದ್ದಿದ್ದಾರೆ.  ತರಕಾರಿ ಬೇಯಿಸುವ ಮುನ್ನವೇ ಮೈಯನ್ನು  ಸುಡುತ್ತಿದೆ. 
 
ತರಕಾರಿ ದರ ಏರಿಕೆಯಿಂದ ಮನೆಯನ್ನು ನಡೆಸಿಕೊಂಡು ಹೋಗುವುದು ಸವಾಲಿನ ಪ್ರಶ್ನೆಯಾಗಿ ಕಾಡುತ್ತಿದೆ. ದಿನನಿತ್ಯ ಅಡುಗೆಗೆ ತರಕಾರಿಯನ್ನು ಬಳಸುವುದು ಅನಿವಾರ್ಯವಾಗಿದೆ.

ಆದರೆ ದಿನನಿತ್ಯದ ಬಜೆಟ್‌ಗೆ ಸರಿದೂಗಿಸಲು ತರಕಾರಿ ಖರೀದಿ ಪ್ರಮಾಣವನ್ನು ಅರ್ಧದಷ್ಟು ಇಳಿಸಿದ್ದೇವೆ ಎಂದು ಗ್ರಾಹಕರು ಹೇಳ್ತಾರೆ.  ಅಕಾಲಿಕ ಮಳೆಯಿಂದಾಗಿ ತರಕಾರಿ  ಬೆಲೆಗಳು ಏರಿವೆ ಎಂದು ಬೆಳೆಗಾರರು ಹೇಳುತ್ತಾರೆ. 

ವೆಬ್ದುನಿಯಾವನ್ನು ಓದಿ