'ಮಾರಿಮುತ್ತು' ಖ್ಯಾತಿಯ ಹಿರಿಯ ನಟಿ ಸರೋಜಮ್ಮ ನಿಧನ

ಶನಿವಾರ, 25 ಜೂನ್ 2016 (09:18 IST)
'ಮಾರಿಮುತ್ತು' ಖ್ಯಾತಿಯ ಖಳ ನಟಿ ಸರೋಜಮ್ಮ(60) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ಮೂವರು ಮಕ್ಕಳನ್ನು ಅಗಲಿದ್ದಾರೆ. 
 
ಸೂಪರ್ ಹಿಟ್ ಸಿನಿಮಾ ಉಪೇಂದ್ರ ಸೇರಿದಂತೆ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಅವರಿಗೆ ಉಪೇಂದ್ರ ಸಿನಿಮಾದ 'ಮಾರಿಮುತ್ತು' ಪಾತ್ರ ಬಹಳ ಹೆಸರನ್ನು ತಂದುಕೊಟ್ಟಿತ್ತು. ಅದೇ ಹೆಸರಿಂದ ಅವರನ್ನು ಗುರುತಿಸಲಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚಿಗೆ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿತ್ತು. 
 
ಶುಕ್ರವಾರ ರಾತ್ರಿ 8.30ಕ್ಕೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ತಕ್ಷಣ ಪುತ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ. 
 
'ಮಾರಿಮುತ್ತು' ಪಾರ್ಥಿವ ಶರೀರವನ್ನು ಕಮಲಾನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. 
 
ಹಿರಿಯ ನಟಿ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ