ಜನಪ್ರತಿನಿಧಿಗಳಿಗೆ ಕಾಣದೇ, ಸೋರುತಿದೆ ವಿಧಾನಸೌಧದ ಮಾಳಿಗೆ

ಮಂಗಳವಾರ, 22 ಜುಲೈ 2014 (17:15 IST)
ಸಚಿವರ ಕೊಠಡಿಗಳ ನವೀಕರಣಕ್ಕೆ ಕೋಟಿ, ಕೋಟಿ ಖರ್ಚು ಮಾಡುವ ನಮ್ಮ ಜನಪ್ರತಿನಿಧಿಗಳು ವಿಧಾನಸೌಧದ ಪೂರ್ವಭಾಗದ ಗೋಪುರದಲ್ಲಿ ಪ್ರತಿ ಸಾರಿ ಮಳೆಯಾದಾಗಲೂ ಸೋರುತ್ತಿದ್ದು, ಇದೇ ದಾರಿಯಲ್ಲಿ ಮುಖ್ಯಮಂತ್ರಿಗಳಾದಿಯಾಗಿ ಎಲ್ಲಾ ಸಚಿವರು, ಶಾಸಕರು ಹಾದುಹೋದರೂ ಈ ಕಡೆ ಗಮನಹರಿಸದಿರುವುದು ಸೋಜಿಗವಾಗಿದೆ.

ಮಳೆ ಸುರಿಯುತ್ತಿದ್ದಂತೆ ಗೋಪುರದಿಂದ ಸೋರುವ ನೀರಿನ ಟಪ್ ಟಪ್ ಸದ್ದು ಜನಪ್ರತಿನಿಧಿಗಳ ಕಿವಿಗೆ ಬಿದ್ದರೂ ಕಿವುಡಾಗಿ ತಮಗೆ ಸಂಬಂಧವಿಲ್ಲವೆಂಬಂತೆ ಸಾಗುತ್ತಿರುವುದು ವಿಚಿತ್ರವೆನಿಸಿದೆ. ನಮ್ಮ ಕೊಠಡಿಗಳ ನವೀಕರಣಕ್ಕೆ, ತಮ್ಮ ನಿವಾಸಗಳಿಗೆ ಹೆಚ್ಚು ಆದ್ಯತೆ ನೀಡುವ ಪ್ರತಿನಿಧಿಗಳು ಗೋಪುರ ಸೋರುತ್ತಿದ್ದರೂ ನಿರ್ಲಕ್ಷ್ಯ ವಹಿಸಿರುವುದು ದುರಂತವೆನ್ನಬಹುದು.

ಕೊಠಡಿಯಲ್ಲಿ ವಾಸ್ತುದೋಷವಿದೆಯೆಂದು ಹೇಳಿ ನವೀಕರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡುವ ಜನಪ್ರತಿನಿಧಿಗಳಿಗೆ ಸೋರುತಿರುವ ಮಾಳಿಗೆ ಕಣ್ಣಿಗೆ ಬೀಳುತ್ತಿಲ್ಲವೇಕೆ? 
 

ವೆಬ್ದುನಿಯಾವನ್ನು ಓದಿ