ವಿಶ್ವನಾಥ್ ವಿರೋಧ ಪಕ್ಷದವರಂತೆ ವರ್ತಿಸುತ್ತಿದ್ದಾರೆ: ಅಂಬರೀಶ್

ಶುಕ್ರವಾರ, 30 ಜನವರಿ 2015 (17:40 IST)
ವಿಶ್ವನಾಥ್ ನಮ್ಮದೇ ಪಕ್ಷದ ಸದಸ್ಯರಾಗಿದ್ದರೂ ವಿರೋಧ ಪಕ್ಷದವರಂತೆ ವರ್ತಿಸುತ್ತಿದ್ದಾರೆ. ಎನ್ನುವ ಮೂಲಕ ವಸತಿ ಸಚಿವ ಅಂಬರೀಶ್ ಅವರು ಮಾಜಿ ಸಂಸದ, ಕಾಂಗ್ರೆಸ್ ನಾಯಕ ಹೆಚ್.ವಿಶ್ವನಾಥ್ ಅವರ ವಿರುದ್ಧ ಗರಂ ಆಗಿದ್ದಾರೆ. 
 
ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ನಮ್ಮದೇ ಪಕ್ಷದ ಸದಸ್ಯರಾಗಿದ್ದಾರೆ. ಆದರೆ ಅವರು ಮಾಧ್ಯಮಗಳೆದುರು ಪದೇ ಪದೇ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದು, ವಿರೋಧ ಪಕ್ಷದವರಂತೆ ವರ್ತಿಸುತ್ತಿದ್ದಾರೆ. ಏನಾದರೂ ಸಮಸ್ಯೆಗಳಿದ್ದಲ್ಲಿ ನನ್ನ ಬಳಿ ಚರ್ಚಿಸಬೇಕಿತ್ತು. ಆದರೆ ಅವರ ಇಂತಹ ಹೇಳಿಕೆಗಳಿಂದ ಬೇಸರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು ವಿಶ್ವನಾಥ್ ವಿರುದ್ಧ ಗರಂ ಆದರು.  

ಇಂದು ಬೆಳಗ್ಗೆ ಮಾಜಿ ಸಂಸದ ಹೆಚ್.ವಿಶ್ವನಾಥ್, ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ವಸತಿ ಸಚಿವ ಅಂಬಕರೀಶ್ ಅವರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆದಿತ್ತು ಎಂದಿದ್ದರು. ಆದರೆ ಅದು ಕಾರ್ಯ ವೈಖರಿ ಬಗ್ಗೆ ಚರ್ಚಿಸಿದ್ದಾಗಿತ್ತೇ ವಿನಃ ಮಾತಿನ ಚಕಮಕಿಯಲ್ಲ ಎಂಬುದು ಸಚಿವ ಅಂಬರೀಶ್ ಅವರ ಹೇಳಿಕೆ.  

ವೆಬ್ದುನಿಯಾವನ್ನು ಓದಿ