ಧರ್ಮಗಳ ನಡುವೆ ವೈಷಮ್ಯ ಹುಟ್ಟು ಹಾಕಲು ಕಾಂಗ್ರೆಸ್‌ನಿಂದ ಟಿಪ್ಪು ಜಯಂತಿ:ಜಗದೀಶ್ ಶೆಟ್ಟರ್

ಶುಕ್ರವಾರ, 28 ಅಕ್ಟೋಬರ್ 2016 (15:37 IST)
ವಿವಾದಿತ ನಾಯಕ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯ ಹಿಂದೆ ವೋಟ್ ಬ್ಯಾಂಕ್ ರಾಜಕಾರಣ ಅಡಗಿದೆ. ಧರ್ಮಗಳ ನಡುವೆ ವೈಷಮ್ಯ ಹುಟ್ಟು ಹಾಕಲು ಟಿಪ್ಪು ಜಯಂತಿ ಆಚರಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದ್ದಾರೆ.
 
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿಯನ್ನು ಕಾಂಗ್ರೆಸ್ ವೋಟ್‌ ಬ್ಯಾಂಕಿಗಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸದ ಸಂಗತಿ. ಟಿಪ್ಪು ಇತಿಹಾಸವನ್ನು ತೆರೆದು ನೋಡಿದ್ರೆ ಆತನ ಚರಿತ್ರೆ ಸರಕಾರಕ್ಕೆ ಗೊತ್ತಾಗುತ್ತೆ ಎಂದರು. 
 
ಟಿಪ್ಪು ಒಬ್ಬ ಧರ್ಮಾಂಧನಾಗಿದ್ದು, ಆತನಿಂದ ಸಾಕಷ್ಟು ಜನ ದಬ್ಬಾಳಿಕೆ ಹಾಗೂ ಅತ್ಯಾಚರಕ್ಕೊಳಗಾಗಿದ್ದಾರೆ ಎಂದು ಆರೋಪಿಸಿದರು. ಟಿಪ್ಪು ಜಯಂತಿ ಯಾವ ಪುರುಷಾರ್ಥಕ್ಕೆ ಆಚರಿಸಬೇಕು ಎನ್ನುವುದನ್ನು ಸಾಬೀತುಪಡಿಸಲಿ. ಟಿಪ್ಪು ಜಯಂತಿ ಬದಲಿಗೆ ಅಬ್ದುಲ್ ಕಲಾಂ ಜಯಂತಿಯನ್ನು ಆಚರಿಸಿದ್ರೆ ಅದನ್ನು ಸ್ವಾಗತಿಸುತ್ತೇವೆ ಎಂದರು. 
 
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರಾಜಕೀಯ ದ್ವೇಷದಿಂದ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ನಡೆಯುತ್ತಿವೆಯ ಸಭ್ಯತೆಯ ಹಣೆಪಟ್ಟಿಯನ್ನು ಕರ್ನಾಟಕ ಇದೀಗ ಗೂಂಡಾ ರಾಜ್ಯವಾಗಿ ಮಾರ್ಪಾಡಾಗಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ರಾಜ್ಯ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ