ಪರಿಷತ್‌ನಲ್ಲಿ ವಿಟಿಯು ತಿದ್ದುಪಡಿ ವಿಧೇಯಕ ಅಂಗೀಕಾರ

ಗುರುವಾರ, 30 ಜುಲೈ 2015 (15:14 IST)
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‌ನಲ್ಲಿ ಇಂದು ಅಂಗೀಕರಿಸಲಾಗಿದೆ. 
 
ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ವಿಧೇಯಕವನ್ನು ಮಂಡಿಸಿದ್ದು, ಅಂಗೀಕರವಾಗಿದೆ. ಇನ್ನು ವಿಧೇಯಕವನ್ನು ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ಪ್ರತಿಪಕ್ಷ ಸದಸ್ಯರು ಸಚಿವರ ವಿರುದ್ಧ ಕೆಲ ಕಾಲ ವಾಗ್ವಾದಗಳನ್ನೂ ನಡೆಸಿದರು. ಈ ನಡುವೆಯೂ ಕೂಡ ವಿಧೇಯಕಕ್ಕೆ ಅಂಗೀಕಾರ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಯಿತು. ವಿವಿಯಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವ ಸಲುವಾಗಿ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ. 
 
ಏಕೆ ವಾಗ್ವಾದ?:
ವಿವಿಯ ಆದಾಯ ತೆರಿಗೆ ಸಂಗ್ರಹಣಾ ವಿಷಯದಲ್ಲಿ ಅಕ್ರಮ ಕಂಡು ಬಂದಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಇತ್ತೀಚೆಗೆ ವಿವಿಗಳನ್ನೂ ಟಾರ್ಗೆಟ್ ಮಾಡಿಕೊಂಡು ತೆರಿಗೆ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ ಎಂಬ ಹೇಳಿಕೆಯನ್ನು ಸಚಿವರು ನೀಡಿದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷಗಳ ಸದಸ್ಯರು, ಆದಾಯ ತೆರಿಗೆ ಇಲಾಖೆ ತನ್ನ ಕರ್ತವ್ಯ ನಿರ್ವಹಿಸಿದೆಯಷ್ಟೇ. ಅದಕ್ಕೆ ನೀವು ಆದಾಯ ತೆರಿಗೆ ಇಲಾಖೆಯನ್ನು ಮುಚ್ಚಲು ಯತ್ನಿಸುತ್ತಿದ್ದೀರಾ ಎಂದು ಸಚಿವರ ವಿರುದ್ಧ ಗುಡುಗಿದರು. ಇತ್ತೀಚೆಗೆ ತೆರಿಗೆ ಅಧಿಕಾರಿಗಳು ವಿವಿಯ ಮೇಲೆ ದಾಳಿ ನಡೆಸಿದ್ದರು. 

ವೆಬ್ದುನಿಯಾವನ್ನು ಓದಿ