ವಾಚ್ ಪ್ರಕರಣದಲ್ಲಿ ನನ್ನಿಂದ ತಪ್ಪಾಗಿಲ್ಲ, ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ: ಸಿಎಂ

ಬುಧವಾರ, 2 ಮಾರ್ಚ್ 2016 (16:28 IST)
ವಿಧಾನಸಭೆ ಕಲಾಪದ ವೇಳೆ ಸಿಎಂ ಸಿದ್ದರಾಮಯ್ಯ ವಾಚ್ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಿದ್ದಾರೆ. ಸದನಕ್ಕೆ ತಮ್ಮ ವಾಚ್‌ನ್ನು ಹಸ್ತಾಂತರ ಮಾಡಿದ್ದಾರೆ.  ಹಸ್ತಾಂತರ ಬಳಿಕವು ಪ್ರತಿಪಕ್ಷಗಳು ಪ್ರತಿಪಕ್ಷಗಳು ಧರಣಿ ಮುಂದುವರಿಸಿದ  ಮುಂದವರೆಸಿದ್ವು. ದುಬಾರಿ ವಾಚ್ ಬಗ್ಗೆ ಉತ್ತರ ನೀಡುವಂತೆ ಪ್ರತಿಪಕ್ಷ ಶಾಸಕರು ಬಿಗಿಪಟ್ಟು ಹಿಡಿದಿದ್ದರು. ಈ ವೇಳೆ ಸದನದ ಬಾವಿಗಿಳಿದು ಪ್ರತಿಪಕ್ಷಗಳು ಧರಣಿ ನಡೆಸಿದ್ದರು. ಈಗಾಗ್ಲೆ ಸ್ಪೀಕರ್‌ಗೆ ವಾಚ್‌ನ ಅಫಿಡೇವಿಟ್, ರಸೀದಿ, ಹಾಗೂ ವಾಚ್‌ನ್ನು ಹಸ್ತಾಂತರ ಮಾಡಿದ್ದಾರೆ. 

ಹಸ್ತಾಂತರ ಬಳಿಕವು ಆಡಳಿತ ಹಾಗೂ ಪ್ರತಿಪಕ್ಷಗಳ ಮಧ್ಯೆ ಗದ್ದಲ ಏರ್ಪಟ್ಟಿತ್ತು. ಈ ವೇಳೆ ಸ್ಪಷ್ಟನೆ ನೀಡಿರುವ ಸಿಎಂ, ಕಲಾಪ ಹಾಳು ಮಾಡುತ್ತೀದಿರಿ, ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇಲ್ಲ ಎಂದು ಪ್ರತಿಪಕ್ಷಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದರು. ಇದೇ ವೇಳೆ ಸಿಎಂ ಕೊಟ್ಟಿರುವ  ದಾಖಲೆಗಳನ್ನು ಓದಿದ ಸ್ಪೀಕರ್ ಕಾಗೋಡ ತಿಮ್ಮಪ್ಪ, ವಾಚ್‌ ಸದನದ ಆಸ್ತಿ ಎಂದು ಘೋಷಣೆ ಮಾಡಿದ್ದರು. ಕ್ಯಾಬಿನೆಟ್‌ ಹಾಲ್‌ನಲ್ಲಿ ವಾಚ್ ಇಡಲಾಗುತ್ತದೆ ಎಂದು ಸ್ಪೀಕರ್ ಕಾಗೋಡ ತಿಮ್ಮಪ್ಪ ಹೇಳಿದ್ದಾರೆ. ತೀವ್ರ ಗದ್ದಲದ ಮಧ್ಯೆಯು ಕಲಾಪವನ್ನು ನಾಳೆಗೆ ಮುಂದೂಡಲಾಯ್ತು. 
 
ಇನ್ನೂ ಇದೇ ವೇಳೆ ಮಾತನಾಡಿರುವ ಜಗದೀಶ್ ಶೆಟ್ಟರ್, ವಾಚ್ ಹಸ್ತಾಂತರಿಸೋ ಮೂಲಕ ಸಿಎಂ ಹೈಡ್ರಾಮಾ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಸುಧಾಕರ್ ಶೆಟ್ಟಿ ಮೇಲಿನ ಒತ್ತಡದ ಕುರಿತು ತನಿಖೆಯಾಗಬೇಕು, ಸಿಎಂ ತಪ್ಪು ಎಸಗಿಲ್ಲವೆಂದರೆ ಭಯ ಪಡುವ ಅಗತ್ಯವಿರಲಿಲ್ಲ, ಈ ಕುರಿತು ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡಲಾಗುವುದು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ