ಬಂಗಾರಪ್ಪರಂತೆ ಸುಗ್ರೀವಾಜ್ಞೆ ತರಲು ಸಾಧ್ಯವಿಲ್ಲ: ಸಚಿವ ಪಾಟೀಲ್

ಶುಕ್ರವಾರ, 9 ಸೆಪ್ಟಂಬರ್ 2016 (16:15 IST)
ಮಾಜಿ ಮುಖ್ಯಮಂತ್ರಿ ಬಂಗಾರಪ್ಪರಂತೆ ತೀರ್ಮಾನ ತೆಗೆದುಕೊಳ್ಳುವುದು ಅಸಾಧ್ಯ. ಕರ್ನಾಟಕ ಬಂದ್ ಆಚರಿಸುವುದರಿಂದ ಸುಪ್ರೀಂಕೋರ್ಟ್ ತೀರ್ಪು  ಬದಲಿಸಲು ಸಾಧ್ಯವಿಲ್ಲ ಎಂದು ಜಲಸಂಪನ್ಮೂಲ ಖಾತೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
 
ಕರ್ನಾಟಕ ಬಂದ್ ಕರೆಯಿಂದಾಗಿ ರಾಜ್ಯದ ಜನತೆಗೆ ತೊಂದರೆಯಾಗುತ್ತದೆ. ಕೇವಲ ಬಂದ್‌ಗೆ ಕರೆ ನೀಡುವುದರಿಂದ ಸುಪ್ರೀಂಕೋರ್ಟ್ ಆದೇಶವನ್ನು ಬದಲಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟ, ಪ್ರತಿಭಟನೆಗಳಿರಬೇಕು. ಆದರೆ, ಶಾಂತಿಯುತವಾಗಿ ಆಚರಿಸಬೇಕು ಎಂದು ಕರೆ ನೀಡಿದರು.
 
ತಮಿಳುನಾಡು ಸರಕಾರ ಮತ್ತೆ ಹೆಚ್ಚುವರಿ ನೀರಿಗೆ ಕ್ಯಾತೆ ತೆಗೆದಿದೆ ಎನ್ನುವ ವರದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವಂತೂ ನೀರು ಬಿಡುವುದಿಲ್ಲ. ಬೇಕಾದಲ್ಲಿ ಕಾವೇರಿ ಮೇಲ್ವಿಚಾರಣೆ ಸಮಿತಿಯೆ ನೀರು ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಕಾವೇರಿ ಟಿಬ್ಯೂನಲ್ ಪ್ರತಿ ತಿಂಗಳು ತಮಿಳುನಾಡಿಗೆ ನೀರು ಹರಿಸುವಂತೆ ಆದೇಶಿಸಿದೆ. ನ್ಯಾಯಾಧೀಕರಣದ ತೀರ್ಪು ರಾಜ್ಯ ಸರಕಾರಕ್ಕೆ ಮಾರಕವಾಗಿದೆ. ಮುಂದಿನ ವಿಚಾರಣೆ ಆಕ್ಟೋಬರ್ 18 ರಂದು ನಡೆಯಲಿದ್ದು, ಎಲ್ಲಾ ಅಂಶಗಳು ನ್ಯಾಯಾಲಯದ ಮುಂದೆ ಬರಲಿವೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ