ಉದ್ಯಮ, ವ್ಯಾಪಾರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ಸಿದ್ಧ: ಸಿಎಂ ಸಿದ್ದರಾಮಯ್ಯ

ಬುಧವಾರ, 3 ಫೆಬ್ರವರಿ 2016 (14:27 IST)
ಕರ್ನಾಟಕದ ಜನತೆಯ ಅಭಿವೃದ್ಧಿಯೇ ನಮ್ಮ ಗುರಿ ಎಂದು ಅರಮನೆ ಮೈದಾನದಲ್ಲಿ ನಡೆದ ಇನ್‌ವೆಸ್ಟ್ ಕರ್ನಾಟಕ 2016ರ ಅಧ್ಯಕ್ಷ ಭಾಷಣದಲ್ಲಿ  ಸಿಎಂ ಸಿದ್ದರಾಮಯ್ಯ  ಹೇಳಿದರು.  ಉದ್ಯಮ, ವ್ಯಾಪಾರಕ್ಕೆ ಅಗತ್ಯ ಸೌಲಭ್ಯ ಒದಗಿಸಲು ತಾವು ಸಿದ್ಧವಿರುವುದಾಗಿ ಸಿಎಂ ಹೇಳಿದರು.

ಪ್ರಸಕ್ತ ಸಾಲಿನಲ್ಲಿ 120 ಬಿಲಿಯನ್ ಡಾಲರ್ ಹೂಡಿಕೆಗೆ ಅವಕಾಶ ನೀಡುತ್ತೇವೆ.   2055ರ ವೇಳೆಗೆ 700 ಬಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಿ ಮಾಡ್ತೇವೆ ಎಂದು ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  ಶೇ. 10 ಅಭಿವೃದ್ಧಿ ದರದ ಗುರಿಯನ್ನು ಹೊಂದಿದ್ದೇವೆ ಎಂದು ಸಿಎಂ ಈ ಸಂದರ್ಭದಲ್ಲಿ ತಿಳಿಸಿದರು.

ಕಾಂಗ್ರೆಸ್ ಅಧಿಕಾರ ವಹಿಸಿಕೊಂಡ ಮೇಲೆ 5.2 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆಯನ್ನು ಕರ್ನಾಟಕ ಸ್ವೀಕರಿಸಿದೆ. ಬಾರತದಲ್ಲಿ ಎರಡನೇ ಅತೀ ಹೆಚ್ಚು ಎಫ್‌ಡಿಐ ಆಕರ್ಷಿಸಿದ ರಾಜ್ಯ ಕರ್ನಾಟಕ.  20 ಶತಕೋಟಿ ಮೌಲ್ಯದ 500ಕ್ಕೂ ಹೆಚ್ಚು ಯೋಜನೆಗಳಿಗೆ ನಾವು ಅನುಮತಿ ನೀಡಿದ್ದೇವೆ. ಕರ್ನಾಟಕವನ್ನು ಭಾರತದ ಬೆಳವಣಿಗೆ ಎಂಜಿನ್ ಮಾಡುವುದು ನಮ್ಮ ಗುರಿ ಎಂದು ಸಿದ್ದರಾಮಯ್ಯ ಹೇಳಿದರು. 

 ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡುವಂತೆ ಜಾಗತಿಕ ಹೂಡಿಕೆದಾರರಿಗೆ ಉದ್ಯಮಿ ರತನ್ ಟಾಟಾ ಕರೆ ನೀಡಿದರು. ಕರ್ನಾಟಕದಲ್ಲಿ ಉದ್ಯಮ ಸ್ನೇಹಿ ವಾತಾವರಣವಿದ್ದು ಬಂಡವಾಳ ಹೂಡಿಕೆ ಮಾಡಿ ಎಂದು ರತನ್ ಟಾಟಾ ಹೇಳಿದರು.

 ಕೇಂದ್ರ ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳಿವೆ. ಪಕ್ಷಗಳ ನಡುವೆ ಭಿನ್ನಾಭಿಪ್ರಾಯವಿದ್ದರೂ, ಅಭಿವೃದ್ಧಿ ದೃಷ್ಟಿಯಲ್ಲಿ ನಮಗೆ ಎಲ್ಲಾ ರಾಜ್ಯಗಳೂ ಒಂದೇ ಎಂದು  ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದರು. 

ವೆಬ್ದುನಿಯಾವನ್ನು ಓದಿ